ಪತಿ-ಪತ್ನಿ ಸಂಬಂಧ ಅತ್ಯಂತ ನಿಕಟವಾಗಿರುತ್ತದೆ. ಒಬ್ಬರು ಅಗಲಿದ್ರೆ ಇನ್ನೊಬ್ಬರಿಗೆ ಅದನ್ನು ಅರಗಿಸಿಕೊಳ್ಳುವುದು ಅಸಾಧ್ಯ. ನೋವಿನ ಮಧ್ಯೆಯೇ ಮತ್ತೊಬ್ಬರು ಜೀವನ ನಡೆಸುತ್ತಾರೆ. ಆದ್ರೆ ಇಲ್ಲೊಬ್ಬ ಮಹಿಳೆ ಗಂಡ ಸತ್ತ ನಂತ್ರ ಮಾಡ್ತಿರುವ ಕೆಲಸ ದಂಗಾಗಿಸುವಂತಿದೆ.
ಈಜಿಪ್ಟ್ ಯುವಕನ ಜೊತೆ ವೈವಾಹಿಕ ಬದುಕಿಗೆ ಕಾಲಿಟ್ಟ ಬಿಲ್ ಗೇಟ್ಸ್ ಪುತ್ರಿ
ಟೆನ್ನೆಸ್ಸಿಯಲ್ಲಿ ವಾಸಿಸುತ್ತಿರುವ ಕ್ಯಾಸ್ಸಿ ಗಂಡ ಅಸ್ತಮಾದಿಂದ ಸಾವನ್ನಪ್ಪಿದ್ದಾನೆ. ಸಾವಿನ ನಂತ್ರ ಆತನಿಂದ ದೂರವಿರುವುದು ಕ್ಯಾಸ್ಸಿಗೆ ಕಷ್ಟವಾಗಿತ್ತಂತೆ. ಹಾಗಾಗಿ ಆತ ಸದಾ ತನ್ನ ಬಳಿ ಇರಬೇಕೆಂಬ ಕಾರಣಕ್ಕೆ ಅಸ್ತಿ ಇಟ್ಟುಕೊಳ್ಳಲು ಶುರು ಮಾಡಿದ್ದಳಂತೆ. ಅಸ್ತಿಯನ್ನು ಹೋಗುವ ಎಲ್ಲ ಕಡೆ ತೆಗೆದುಕೊಂಡು ಹೋಗ್ತಿದ್ದಳಂತೆ. ತರಕಾರಿ ತರುವುದ್ರಿಂದ ಹಿಡಿದು, ಊಟ ಮಾಡುವಾಗ ಕೂಡ ಅಸ್ತಿ ಆಕೆ ಬಳಿ ಇರುತ್ತದೆಯಂತೆ. ಗಂಡನಿಗೆ ತರಕಾರಿ ಖರೀದಿ ಮಾಡುವ ಆಕೆ, ಆತನಿಗೆ ಅಡುಗೆ ಮಾಡ್ತಾಳಂತೆ. ಆದ್ರೆ ಇದೆಲ್ಲಕ್ಕಿಂತ ವಿಚಿತ್ರವಾದ ವಿಷ್ಯವೆಂದ್ರೆ ಗಂಡನ ಚಿತಾಭಸ್ಮ ತಿನ್ನವುದು.
ಬೀಗ ಒಡೆದು ಮನೆಯೊಳಗೆ ಹೋದ ಪತಿಗೆ ಬಿಗ್ ಶಾಕ್
ಒಂದು ದಿನ ಚಿತಾಭಸ್ಮ ಕೆಳಗೆ ಬಿದ್ದಿತ್ತಂತೆ. ಅದನ್ನು ಎಸೆಯಲು ಮನಸ್ಸಾಗಲಿಲ್ಲವಂತೆ. ಅದನ್ನು ಕೈನಲ್ಲಿ ತೆಗೆದುಕೊಂಡ ಕ್ಯಾಸ್ಸಿ, ಅದನ್ನು ನೆಕ್ಕಿದ್ದಳಂತೆ. ಅಲ್ಲಿಂದ ಚಿತಾಭಸ್ಮ ತಿನ್ನುವ ಹವ್ಯಾಸ ಶುರುವಾಗಿದೆ. ಇಲ್ಲಿಯವರೆಗೆ ಸುಮಾರು ಒಂದು ಕಿಲೋಗ್ರಾಮ್ ಚಿತಾಭಸ್ಮ ತಿಂದಿದ್ದಾಳಂತೆ. ಇದು ಅಪಾಯಕಾರಿ ಎಂದು ವೈದ್ಯರು ಹೇಳಿದ್ದಾರೆ. ಬೂದಿ ಖಾಲಿಯಾದ್ರೆ ಎಂಬ ಭಯ ಕ್ಯಾಸ್ಸಿಗಿದೆ. ಈ ಮಧ್ಯೆ ಆಕೆಗೆ ಚಿಕಿತ್ಸೆ ನಡೆಯುತ್ತಿದೆ.