
ಈ ವಿಡಿಯೋ ನೋಡಿದ ನೆಟ್ಟಿಗರು ಶಾಕ್ ಆಗಿದ್ದಾರೆ. ಸ್ಮಶಾನದ ಹೊರಗಿನ ರಸ್ತೆಯಲ್ಲಿ ಕಾರಿನಲ್ಲಿ ತೆರಳುತ್ತಿದ್ದ ಪ್ರಯಾಣಿಕರೊಬ್ಬರು ಈ ವಿಡಿಯೋವನ್ನು ಚಿತ್ರೀಕರಿಸಿದ್ದಾರೆ ಎನ್ನಲಾಗಿದೆ. ಈ ಘಟನೆ ಸೆಪ್ಟೆಂಬರ್ 11ರಂದು ನಡೆದಿದೆ.
ನನ್ ರಂತೆ ಕಾಣುತ್ತಿರುವ ಮಹಿಳೆ ಮನುಷ್ಯನ ಅಸ್ಥಿಪಂಜರವನ್ನು ಹಿಡಿದು ನೃತ್ಯ ಮಾಡುತ್ತಿರೋದನ್ನು ಕಾಣಬಹುದಾಗಿದೆ. ಮತ್ತೊಂದು ಫೋಟೋದಲ್ಲಿ ಆಕೆ ನಾಯಿ ರೀತಿ ಕಾಣುತ್ತಿರುವ ಪ್ರಾಣಿಯೊಂದರ ಜೊತೆ ಆಟವಾಡ್ತಿರೋದನ್ನೂ ಕಾಣಬಹುದಾಗಿದೆ.
ಅನೇಕರು ಈ ದೃಶ್ಯವನ್ನು ನೋಡುತ್ತಿದ್ದರೂ ಸಹ ಅದರ ಬಗ್ಗೆ ಪರಿವೆಯೇ ಇಲ್ಲದಂತಿದ್ದ ನನ್ ತನ್ನ ಪಾಡಿಗೆ ತಾನು ಅಸ್ಥಿ ಪಂಜರದ ಜೊತೆ ಕಾಲ ಕಳೆದಿದ್ದಾಳೆ. ಅನೇಕರು ಇದೇನಿದು ವಿಚಿತ್ರ ಎಂದು ಹೇಳುತ್ತಿದ್ದರೆ ಇನ್ನೂ ಕೆಲವರು ಇದು ಪೂರ್ವನಿಯೋಜಿತ ವಿಡಿಯೋ ಎಂದಿದ್ದಾರೆ.