ಪ್ರೀ ವೆಡ್ಡಿಂಗ್, ವೆಡ್ಡಿಂಗ್, ಪೋಸ್ಟ್ ವೆಡ್ಡಿಂಗ್ ಫೋಟೋ ಶೂಟ್ನಲ್ಲಿ ಕ್ರಿಯಾಶೀಲತೆ ತರುವ ಪ್ರಯತ್ನ ಇತ್ತೀಚೆಗೆ ನಡೆಯುತ್ತಿದೆ. ಅನೇಕ ಸಾಹಸಗಳು ಕೂಡ ಮಾಡಲಾಗುತ್ತಿದೆ.
ಇಲ್ಲೊಬ್ಬಳು ಮಧುಮಗಳು ಮದುವೆ ಮಂಟಪಕ್ಕೆ ರಾಯಲ್ ಎನ್ಫೀಲ್ಡ್ನಲ್ಲಿ ರಾಯಲ್ ಆಗಿ ಎಂಟ್ರಿಕೊಟ್ಟಿದ್ದು, ಅದರ ವಿಡಿಯೋ ವೈರಲ್ ಆಗಿದೆ. ಇದು ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಇರಬಹುದೇ ಎಂಬುದು ಖಚಿತವಿಲ್ಲ. ಆದರೆ, ಮಧುಮಗಳು ಅದ್ಧೂರಿಯಾಗಿ ಹೊರಟಿರುವುದು ವಿಶೇಷವೆನಿಸುತ್ತದೆ.
ಈ ವಿಡಿಯೋವನ್ನು ಮೇಕಪ್ ಆರ್ಟಿಸ್ಟ್ ದೀಪಾಲಿ ಹಾಗೂ ವಧು ವೈಶಾಲಿ ಚೌಧರಿ ಇನ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ವಧು ದೆಹಲಿಯವರಾಗಿದ್ದು, ಸದ್ಯ ವಿಡಿಯೋ 1 ಮಿಲಿಯನ್ಗೂ ಹೆಚ್ಚು ವೀಕ್ಷಣೆಯಾಗಿದೆ.
ತನ್ನ ಮದುವೆ ದಿನದಂದು ಮದುವೆಯ ಸ್ಥಳಕ್ಕೆ ಗ್ರ್ಯಾಂಡ್ ಎಂಟ್ರಿ ಕೊಡುವುದು ಪ್ರತಿಯೊಬ್ಬ ವಧುವಿನ ಕನಸಾಗಿರುತ್ತದೆ. ಆದರೆ ಈ ವಧು ಮಾಡಿದ ಸಾಹಸವನ್ನು ಮಾಡಲು ಎಲ್ಲರಿಂದಲೂ ಸಾಧ್ಯವಿಲ್ಲ.
ಭಾರವಾದ ಲೆಹೆಂಗಾ ಧರಿಸಿದ್ದ ವಧು ವೈಶಾಲಿ ರಾಯಲ್ ಎನ್ಫೀಲ್ಡ್ ಅನ್ನು ತುಂಬಾ ಲೀಲಾಜಾಲವಾಗಿ ಓಡಿಸಿದ್ದು, ಆತ್ಮವಿಶ್ವಾಸದ ಜತೆಗೆ ಸವಾರಿಯನ್ನು ಆನಂದಿಸುವುದು ವಿಡಿಯೋದಲ್ಲಿ ಕಾಣಿಸುತ್ತದೆ. ಭಾರವಾದ ಆಭರಣ ಮತ್ತು ಲೆಹೆಂಗಾವನ್ನು ಧರಿಸಿ ಹೇಗೆ ಬೈಕ್ ಓಡಿಸಿದರು ಎಂಬುದು ಸಾಕಷ್ಟು ಅಚ್ಚರಿ ಎನಿಸುತ್ತದೆ.