ಯುಕೆ ಮಹಿಳೆಯೊಬ್ಬರು ತಾನು ಎಸೆಯಲು ಹೊರಟಿದ್ದ ಕಲ್ಲಿನಲ್ಲಿ 20 ಕೋಟಿ ಮೌಲ್ಯದ 34 ಕ್ಯಾರೆಟ್ ವಜ್ರವಿದೆ ಎಂದು ತಿಳಿದಾಗ ದಿಗ್ಭ್ರಮೆಗೊಂಡಿದ್ದಾರೆ.
70 ರ ಹರೆಯದ ಮಹಿಳೆಯು ವರ್ಷಗಳ ಹಿಂದೆ ಕಾರ್ ಬೂಟ್ ಮಾರಾಟದಲ್ಲಿ ಕಲ್ಲನ್ನು ಖರೀದಿಸಿದ್ದರು. ಆದರೆ ಅದರ ಮೌಲ್ಯದ ಬಗ್ಗೆ ಅವರಿಗೆ ತಿಳಿದಿರಲಿಲ್ಲ.
ನೆರೆಹೊರೆಯವರ ಮಾಹಿತಿ ನಂತರ ಅದರ ಮೌಲ್ಯವನ್ನು ಕಂಡುಹಿಡಿಯಲು ಮಹಿಳೆ ನಿರ್ಧರಿಸಿದ್ದಳು. ಜ್ಯುವೆಲ್ಲರಿ ಅಂಗಡಿಗೆ ತೆಗೆದುಕೊಂಡು ಹೋದ ಮೂರು ದಿನಗಳ ನಂತರ ಡೈಮಂಡ್ ಟೆಸ್ಟರ್ ಬಳಸಿ ನೋಡಿದ್ದಾರೆ. ಆಗ ಎಲ್ಲರಿಗೂ ಅಚ್ಚರಿಯಾಗಿದೆ.
ಒಂದು ಪೌಂಡ್ ನಾಣ್ಯಕ್ಕಿಂತ ದೊಡ್ಡದಾದ ವಜ್ರವನ್ನು ನವೆಂಬರ್ 30 ರಂದು ಹರಾಜು ಮಾಡಲಾಗುತ್ತದೆ. ಅಲ್ಲಿಯವರೆಗೆ, ಲಂಡನ್ನ ಡೈಮಂಡ್ ಕ್ವಾರ್ಟರ್ ಹ್ಯಾಟನ್ ಗಾರ್ಡನ್ಸ್ನಲ್ಲಿರುವ ಸ್ಥಳದಲ್ಲಿ ಅದನ್ನು ಸುರಕ್ಷಿತವಾಗಿ ಇರಿಸಲಾಗಿದೆ.