alex Certify ಹಾವು ನೋಡಿದ ಮಹಿಳೆ ಆಘಾತದಿಂದ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಾವು ನೋಡಿದ ಮಹಿಳೆ ಆಘಾತದಿಂದ ಸಾವು

ಪುರಿ: ಪುರಿ ಜಿಲ್ಲೆಯ ಸತ್ಯಬಾಡಿ ಬ್ಲಾಕ್‌ ನ ಸೆಬಕಾ ಸಾಹಿಯಲ್ಲಿ ಶನಿವಾರ ರಾತ್ರಿ ಕೋಳಿ ಗೂಡಿನಲ್ಲಿ ಹಾವನ್ನು ನೋಡಿದ 57 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ.

ಮೃತರನ್ನು ಜಿಲ್ಲೆಯ ನಿವಾಸಿ ನರಖಾರಿ ಭೋಯ್ ಎಂದು ಗುರುತಿಸಲಾಗಿದೆ.

ನರಖಾರಿಯ ಮನೆಯ ಸಮೀಪವಿರುವ ಕೋಳಿಮನೆಗೆ ಹಾವು ಪ್ರವೇಶಿಸಿದೆ. ಕೋಳಿಮನೆಯ ಮೂಲಕ ಹಾವು ಹಾದು ಹೋಗುತ್ತಿದ್ದಾಗ ಅವಳು ಗಾಬರಿಗೊಂಡಳು. ಆಕೆಯ ಕಿರುಚಾಟ ಕೇಳಿ ಕುಟುಂಬಸ್ಥರು ಸ್ಥಳಕ್ಕಾಗಮಿಸಿ ನೋಡಿದಾಗ ನರಖಾರಿ ನೆಲದ ಮೇಲೆ ನಿರ್ಜೀವವಾಗಿ ಬಿದ್ದಿರುವುದು ಕಂಡು ಬಂದಿದೆ.

ಕೂಡಲೇ ಆಕೆಯನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ಘೋಷಿಸಿದರು. ಮಾಹಿತಿ ತಿಳಿದ ಉರಗ ಸಹಾಯವಾಣಿ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಹಾವನ್ನು ರಕ್ಷಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...