ಸೃಜನಶೀಲತೆಯ ಆಧಾರದ ಮೇಲೆ ಹೊಸ ಟ್ರೆಂಡ್‌ಗಳನ್ನು ಪ್ರಯೋಗಿಸುವುದು ಮತ್ತು ಹಳೆಯ ಶೈಲಿಗಳನ್ನು ಮರುಸೃಷ್ಟಿಸುವುದು ಈಗಿನ ಫ್ಯಾಷನ್ ಆಗಿದೆ. ಅಂಥದ್ದೇ ಒಂದು ವಿಡಿಯೋ ವೈರಲ್ ಆಗಿದೆ.
1970 ರ ದಶಕದ ಉಡುಪನ್ನು ವಿಂಟೇಜ್-ಪ್ರೇರಿತ ಹುಟ್ಟುಹಬ್ಬದ ಉಡುಪಾಗಿ ಪರಿಷ್ಕರಿಸಲು ಯುವತಿಯೊಬ್ಬಳು ಪ್ರಯತ್ನಿಸಿದ್ದು, ಅದು ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ಇದು ಫ್ಯಾಷನ್ ಜಗತ್ತಿನಲ್ಲಿ ವಿವಿಧ ದೃಷ್ಟಿಕೋನಗಳನ್ನು ಎತ್ತಿ ತೋರಿಸುವಂತಿದೆ.
ದಿ ಕಸಿನ್ ಎಫೆಕ್ಟ್ – ಬೆಸ್ಟ್ ಮ್ಯಾನ್ ಮತ್ತು ಡ್ಯಾಡಿಸ್ ವಾಲೆಟ್‌ನಂತಹ ಚಲನಚಿತ್ರಗಳಲ್ಲಿ ನಟಿಸಿದ ನಟ ಕೆಲ್ಲಿ ಹೇಯರ್ ಈ ಹೊಸ ವಿಂಟೇಜ್ ಫ್ಯಾಷನ್ ಕುರಿತು ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ವಿಂಟೇಜ್ ನೈಟ್‌ಗೌನ್‌ಗಳನ್ನು ತೊಟ್ಟು ಆಕೆ ಅದನ್ನು ಪ್ರದರ್ಶಿಸಿದ್ದಾರೆ. 60ರ ದಶಕದ ವೇಷಭೂಷಣಗಳಿಂದ ಸ್ಫೂರ್ತಿ ಪಡೆದು ವಿಂಟೇಜ್ ಡ್ರೆಸ್ ಧರಿಸಿ ಅವುಗಳ ಮಾಹಿತಿ ನೀಡಿದ್ದಾಳೆ.
ಈ ಡ್ರೆಸ್ಗಳಲ್ಲಿ ಲೇಸ್, ದಪ್ಪನಾದ ಮಣಿಗಳು ಮತ್ತು ಮುತ್ತುಗಳನ್ನು ಸೇರಿಸಿರುವುದನ್ನು ನೋಡಬಹುದು. ಇದು ಅದ್ಭುತ ಎನ್ನುವಂಥ ಡ್ರೆಸ್ ಆಗಿದ್ದು, ನೆಟ್ಟಿಗರು ಹುಬ್ಬೇರಿಸಿದ್ದಾರೆ. ಇಂಥ ಸೃಜನಶೀಲ ಕಸೂತಿ ಕೆಲಸವನ್ನು ಆ ಕಾಲದಲ್ಲಿ ಅದೆಷ್ಟು ಸುಂದರವಾಗಿ ಮಾಡುತ್ತಿದ್ದರು ಎಂದು ನೆಟ್ಟಿಗರು ಬಣ್ಣಿಸುತ್ತಿದ್ದಾರೆ.
https://www.youtube.com/watch?v=AmdOkp92PgM