alex Certify ವೈರಲ್ ಹಾಡಿಗೆ ಮಹಿಳಾ ಪೊಲೀಸ್ ಸಖತ್ ನೃತ್ಯ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೈರಲ್ ಹಾಡಿಗೆ ಮಹಿಳಾ ಪೊಲೀಸ್ ಸಖತ್ ನೃತ್ಯ….!

ಪಾಕಿಸ್ತಾನಿ ಹುಡುಗಿ ಆಯೇಷಾ ರಾತ್ರಿ ಕಳೆದು ಬೆಳಗಾಗೋಷ್ಟರಲ್ಲಿ ಖ್ಯಾತಿ ಗಳಿಸಿದವರು. ಮದುವೆ ಸಮಾರಂಭವೊಂದರಲ್ಲಿ ಲತಾ ಮಂಗೇಶ್ಕರ್ ಅವರ ಮೇರಾ ದಿಲ್ ಯೇ ಪುಕರೆ ಆಜಾಗೆ ನೃತ್ಯ ಮಾಡಿದಾಗ ಅವರು ರಾತ್ರೋರಾತ್ರಿ ಇಂಟರ್ನೆಟ್ ಸೆನ್ಸೇಷನ್ ಆದರು.

ಅದೇ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು ಹಲವಾರು ಜನರು ಆಯೇಷಾನಂತೆ ಡ್ಯಾನ್ಸ್ ಮರುಸೃಷ್ಟಿಸಿದ್ದಾರೆ. ಇದೀಗ ಈ ಹಾಡಿಗೆ ಮಹಿಳಾ ಪೊಲೀಸ್ ಕೂಡ ಅದೇ ರೀತಿ ಮಾಡಿದ್ದಾರೆ. ಆ ವಿಡಿಯೋ ಕೂಡ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ.

ಇದೀಗ ವೈರಲ್ ಆಗಿರುವ ವಿಡಿಯೋವನ್ನು ಮಹಿಳಾ ಪೊಲೀಸ್ ಈಕ್ಷಾ ಕೆರುಂಗ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಅವರು ತಮ್ಮನ್ನು ಪೋಲೀಸ್, ಸೂಪರ್ ಮಾಡೆಲ್, ಬಾಕ್ಸರ್, ರೈಡರ್ ಎಂದು ಹೇಳಿಕೊಂಡಿದ್ದಾರೆ.

ವಿಡಿಯೋ ಕ್ಲಿಪ್ ನಲ್ಲಿ ಮಹಿಳಾ ಪೊಲೀಸ್ ಈಕ್ಷಾ ತಮ್ಮ ಪೊಲೀಸ್ ಸಮವಸ್ತ್ರದಲ್ಲಿ ಟ್ರೆಂಡಿಂಗ್ ಟ್ರ್ಯಾಕ್‌ಗೆ ನೃತ್ಯ ಮಾಡುವುದನ್ನು ಕಾಣಬಹುದು. ಆನ್‌ಲೈನ್‌ನಲ್ಲಿ ಹಂಚಿಕೊಂಡ ನಂತರ ವೀಡಿಯೊ ಆರು ಮಿಲಿಯನ್ ವೀಕ್ಷಣೆಗಳನ್ನು ಸಂಗ್ರಹಿಸಿದೆ. ಕಾಮೆಂಟ್‌ಗಳ ವಿಭಾಗವು ಹೃದಯ ಮತ್ತು ಬೆಂಕಿಯ ಎಮೋಜಿಗಳಿಂದ ತುಂಬಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...