alex Certify 14 ಬಾರಿ ಒತ್ತಾಯದ ಗರ್ಭಪಾತದ ನಂತರ ಮಹಿಳೆ ಆತ್ಮಹತ್ಯೆ: ಪತ್ರದಲ್ಲಿ ಬರೆದಿಟ್ಟಿದ್ದಳು ತಾನು ಅನುಭವಿಸಿದ ನರಕಯಾತನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

14 ಬಾರಿ ಒತ್ತಾಯದ ಗರ್ಭಪಾತದ ನಂತರ ಮಹಿಳೆ ಆತ್ಮಹತ್ಯೆ: ಪತ್ರದಲ್ಲಿ ಬರೆದಿಟ್ಟಿದ್ದಳು ತಾನು ಅನುಭವಿಸಿದ ನರಕಯಾತನೆ

ದೆಹಲಿಯಲ್ಲಿ ಬೆಳಕಿಗೆ ಬಂದ ಮಹಿಳೆಯ ಆತ್ಮಹತ್ಯಾ ಪ್ರಕರಣ, ಎಂಥವರನ್ನೂ ಬೆಚ್ಚಿಬೀಳಿಸೋ ಹಾಗಿತ್ತು. ಯಾಕಂದ್ರೆ ಆಕೆ ತನ್ನ ಜೀವನದಲ್ಲಿ ಅನುಭವಿಸಿದ ಒಂದೊಂದು ನರಕಯಾತನೆಯ ಕ್ಷಣಗಳನ್ನ, ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ಅದೇ ಪತ್ರದಲ್ಲಿ ಆಕೆ 14 ಬಾರಿ ಒತ್ತಾಯದ ಗರ್ಭಪಾತಕ್ಕೆ ಒಳಗಾಗಿದ್ದನ್ನೂ ಕೂಡಾ ಬರೆದಿಟ್ಟಿದ್ದಳು.

ಆಕೆಗೆ 33 ವರ್ಷ. ಆಕೆ ತನ್ನ ಗೆಳೆಯನ ಜೊತೆಗೆ ಲೀವ್‌ ಇನ್‌ ರಿಲೇಶನ್‌ಶಿಪ್‌ನಲ್ಲಿದ್ದಳು. ಕಳೆದ 8ವರ್ಷಗಳಿಂದಲೂ ಅವರು ಒಟ್ಟೊಟ್ಟಿಗೆ ಇದ್ದವರು. ಅದೇ ಗೆಳೆಯನ ಜೊತೆಗೆ ದೈಹಿಕ ಸಂಬಂಧ ಬೆಳೆಸಿಕೊಂಡಿದ್ದ ಆಕೆ 14 ಬಾರಿ ಗರ್ಭವತಿಯಾಗಿದ್ದಳು. ಆದರೆ ಅದೇ ಗೆಳೆಯ ಒತ್ತಾಯದಿಂದ ಗರ್ಭಪಾತ ಮಾಡಿಸಿದ್ದ. ಇದೆಲ್ಲ ಹಿಂಸೆಗಳನ್ನ ತಡೆದುಕೊಳ್ಳೊದಕ್ಕಾಗದೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಆತ್ಮಹತ್ಯಾ ಪತ್ರದಲ್ಲಿ ಬರೆದಿಟ್ಟಿದ್ದಾರೆ.

ಜುಲೈ 5ರಂದು ದೆಹಲಿಯ ಜೈತ್‌ಪುರದಲ್ಲಿ ಈ ಘಟನೆ ನಡೆದಿದ್ದು, ಮಹಿಳೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈಕೆ ತನ್ನ ಲಿವ್ ಇನ್ ರಿಲೇಶನ್‌ಶಿಪ್‌ ಗೆಳೆಯ ಕೊಡುತ್ತಿದ್ದ ಚಿತ್ರಹಿಂಸೆಗಳ ಬಗ್ಗೆ ಬರೆದಿದ್ದು, ಆತ ತನ್ನನ್ನು ದೈಹಿಕವಾಗಿ ಬಳಸಿಕೊಳ್ಳುತ್ತಿದ್ದ ಅನ್ನುವುದನ್ನೂ ಬರೆದಿದ್ದಾರೆ. ಅಷ್ಟೆ ಅಲ್ಲ ಆತ ಮದುವೆ ಮಾಡಿಕೊಳ್ಳುವ ನೆಪದಲ್ಲಿ ತನ್ನನ್ನ ಬಳಸಿಕೊಂಡು ಕೊನೆಗೆ ತನ್ನನ್ನು ದೂರ ಮಾಡಿದ್ದ ಅನ್ನುವುದು ಕೂಡಾ ಪತ್ರದಲ್ಲಿ ಬರೆಯಲಾಗಿದೆ. ಈ ಮುಂಚೆಯೇ ಆಕೆ ಮದುವೆಯಾಗಿದ್ದರೂ ತನ್ನ ಗಂಡನಿಂದ ದೂರವಾಗಿ ಗೆಳೆಯನ ಜೊತೆ ವಾಸಿಸುತ್ತಿದ್ದಳು. ಆದರೆ ಆತ ಮಾತ್ರ ಆಕೆಯನ್ನ ಮೋಸ ಮಾಡಿ ದೂರವಾಗಿದ್ದ, ಮಾನಸಿಕವಾಗಿ ನೊಂದ ಆಕೆ, ಬೇರೆ ಮಾರ್ಗವಿಲ್ಲದೆ ಕೊನೆಗೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅಂತ ದೆಹಲಿ ಪೊಲೀಸ ಅಧಿಕಾರಿಗಳು ಹೇಳಿದ್ದಾರೆ.

ನೋಯ್ಡಾ ಸಾಪ್ಟ್‌ವೇರ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಆಕೆಯ ಗೆಳೆಯನನ್ನು ಬಂಧಿಸಲಾಗಿದೆ. ಆತ್ಮಹತ್ಯೆಗೆ ಪ್ರಚೋದನೆ ಆರೋಪ ಆ ವ್ಯಕ್ತಿಯ ಮೇಲಿದೆ. ಹಾಗೂ ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆಯ ಶವವನ್ನ ಪೊಸ್ಟ್‌ಮಾರ್ಟಂ ಮಾಡಿಸಿ ಕೊನೆಗೆ ಮಹಿಳೆಯ ಶವವನ್ನ ಕುಟುಂಬದವರಿಗೆ ಒಪ್ಪಿಸಲಾಗಿದೆ ಅಂತ ಪೊಲೀಸ್ ಉಪಾಯುಕ್ತರಾಗಿರುವ ಇಶಾಪಾಂಡೆಯವರು ತಿಳಿಸಿದ್ದಾರೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...