alex Certify Video | ನಾನ್‌ಸ್ಟಾಪ್ ಆಗಿ ಬುಟ್ಟಿಗಳಲ್ಲಿ ಹಣ್ಣು ತುಂಬಿದ ಯುವತಿ; ಟ್ಯಾಲೆಂಟ್ ನೋಡಿ ನೆಟ್ಟಿಗರು ಶಾಕ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Video | ನಾನ್‌ಸ್ಟಾಪ್ ಆಗಿ ಬುಟ್ಟಿಗಳಲ್ಲಿ ಹಣ್ಣು ತುಂಬಿದ ಯುವತಿ; ಟ್ಯಾಲೆಂಟ್ ನೋಡಿ ನೆಟ್ಟಿಗರು ಶಾಕ್

ನೀವು ಮಾರ್ಕೆಟ್ಟಿಗೆ ಹೋದಾಗ, ಅಲ್ಲಿ ಚಿಕ್ಕ-ಪುಟ್ಟ ಕೆಲಸ ಮಾಡುವ ಕೆಲಸಗಾರರನ್ನ ಗಮನಿಸಿದ್ದೀರಾ? ಕೆಲವರು ನಿಧಾನಕ್ಕೆ ಮಾಡ್ತಿದ್ರೆ, ಇನ್ನು ಕೆಲವರು ಶಾಕ್ ಆಗೋ ರೀತಿ ಕೆಲಸ ಮಾಡ್ತಿರ್ತಾರೆ. ಅದು ಅವರ ಟ್ಯಾಲೆಂಟ್ ಆ ರೀತಿ ಕೆಲಸ ಮಾಡುವವರ ವಿಡಿಯೋಗಳು ವೈರಲ್ ಆಗ್ತಾನೇ ಇರುತ್ತೆ. ಈಗ ಅದೇ ರೀತಿಯ ವಿಡಿಯೋ ಒಂದು ವೈರಲ್ ಆಗಿದೆ.

17 ಸೆಕೆಂಡ್‌ನ ಈ ವಿಡಿಯೋವನ್ನು ‘ಹೌ ಥಿಂಕ್ ವರ್ಕ್ಸ್’ ಅನ್ನೊ ವೆಬ್ ಸೈಟ್ ನಲ್ಲಿ ಈ ಅಪ್‌ಲೋಡ್ ಮಾಡಲಾಗಿದೆ. ಈ ವಿಡಿಯೋದಲ್ಲಿ ಮಹಿಳೆಯೊಬ್ಬಳು ಪ್ಲಾಸ್ಟಿಕ್ ಟ್ರೇಗಳಲ್ಲಿ ಹಣ್ಣುಗಳನ್ನ ತುಂಬುತ್ತಿರುವುದನ್ನ ನೋಡಬಹುದು. ಬುಟ್ಟಿಯಲ್ಲಿ ಹಣ್ಣು ತುಂಬೋದು ಕಾಮನ್. ಆದರೆ ಆ ಬುಟ್ಟಿ ತುಂಬಿದ ಮೇಲೆ ಇನ್ನೊಂದು ಬುಟ್ಟಿ ಅದೇ ಜಾಗದಲ್ಲಿ ಸ್ಥಳಾಂತರ ಮಾಡುವುದಿದೆಯಲ್ಲ. ಅದು ಆಕೆಯ ಅಸಲಿ ಟ್ಯಾಲೆಂಟ್ ಏನು ಅನ್ನೋದನ್ನು ತೋರಿಸುತ್ತೆ.

ಅಸಲಿಗೆ ಆಕೆ, ಕಿತ್ತಳೆಹಣ್ಣು ತುಂಬಿದ ತಕ್ಷಣ ಒಂದು ಕಾಲಿನಿಂದ ಹಿಂದೆ ನಿಂತಿರುವ ಸಹೋದ್ಯೋಗಿಯತ್ತ ತಳ್ಳುತ್ತಾಳೆ. ಆ ನಂತರ ಆಕೆ ತಕ್ಷಣವೇ, ಅಲ್ಲೇ ಕೆಳಗೆ ಇದ್ದ ಇನ್ನೊಂದು ಬುಟ್ಟಿ ತೆಗೆದು ಹಣ್ಣನ್ನ ತುಂಬಲು ಆರಂಭಿಸುತ್ತಾಳೆ. ಆ ರೀತಿ ಅವಳು ನಾನ್ ಸ್ಟಾಪ್ ಆಗಿ ಮಾಡ್ತಿರ್ತಾಳೆ. ಇದೇ ವಿಡಿಯೋ ನೋಡಿ ಈಗ ನೆಟ್ಟಿಗರು ಶಾಕ್ ಆಗಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಈ ರೀತಿಯ ವಿಡಿಯೋಗಳು ಆಗಾಗ ವೈರಲ್ ಆಗ್ತಾನೇ ಇರುತ್ತೆ. ಚಿಕ್ಕಪುಟ್ಟ ಕೆಲಸಗಳಲ್ಲೂ ತಮ್ಮ ಪ್ರತಿಭೆ ಏನು ಅಂತ ಅನ್ನೊದನ್ನ ತೋರಿಸ್ತಿರ್ತಾರೆ. ಅವರು ಕೆಲಸ ಮಾಡೋ ರೀತಿ ನೋಡೇ ಈ ಕೆಲಸ ಹೀಗೂ ಮಾಡಹುದಾ ಅಂತ ಎಷ್ಟೋ ಜನರಿಗೆ ಅನ್ಸುತ್ತೆ.

— H0W_THlNGS_W0RK (@HowThingsWork_) March 7, 2023

 

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...