
17 ಸೆಕೆಂಡ್ನ ಈ ವಿಡಿಯೋವನ್ನು ‘ಹೌ ಥಿಂಕ್ ವರ್ಕ್ಸ್’ ಅನ್ನೊ ವೆಬ್ ಸೈಟ್ ನಲ್ಲಿ ಈ ಅಪ್ಲೋಡ್ ಮಾಡಲಾಗಿದೆ. ಈ ವಿಡಿಯೋದಲ್ಲಿ ಮಹಿಳೆಯೊಬ್ಬಳು ಪ್ಲಾಸ್ಟಿಕ್ ಟ್ರೇಗಳಲ್ಲಿ ಹಣ್ಣುಗಳನ್ನ ತುಂಬುತ್ತಿರುವುದನ್ನ ನೋಡಬಹುದು. ಬುಟ್ಟಿಯಲ್ಲಿ ಹಣ್ಣು ತುಂಬೋದು ಕಾಮನ್. ಆದರೆ ಆ ಬುಟ್ಟಿ ತುಂಬಿದ ಮೇಲೆ ಇನ್ನೊಂದು ಬುಟ್ಟಿ ಅದೇ ಜಾಗದಲ್ಲಿ ಸ್ಥಳಾಂತರ ಮಾಡುವುದಿದೆಯಲ್ಲ. ಅದು ಆಕೆಯ ಅಸಲಿ ಟ್ಯಾಲೆಂಟ್ ಏನು ಅನ್ನೋದನ್ನು ತೋರಿಸುತ್ತೆ.
ಅಸಲಿಗೆ ಆಕೆ, ಕಿತ್ತಳೆಹಣ್ಣು ತುಂಬಿದ ತಕ್ಷಣ ಒಂದು ಕಾಲಿನಿಂದ ಹಿಂದೆ ನಿಂತಿರುವ ಸಹೋದ್ಯೋಗಿಯತ್ತ ತಳ್ಳುತ್ತಾಳೆ. ಆ ನಂತರ ಆಕೆ ತಕ್ಷಣವೇ, ಅಲ್ಲೇ ಕೆಳಗೆ ಇದ್ದ ಇನ್ನೊಂದು ಬುಟ್ಟಿ ತೆಗೆದು ಹಣ್ಣನ್ನ ತುಂಬಲು ಆರಂಭಿಸುತ್ತಾಳೆ. ಆ ರೀತಿ ಅವಳು ನಾನ್ ಸ್ಟಾಪ್ ಆಗಿ ಮಾಡ್ತಿರ್ತಾಳೆ. ಇದೇ ವಿಡಿಯೋ ನೋಡಿ ಈಗ ನೆಟ್ಟಿಗರು ಶಾಕ್ ಆಗಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಈ ರೀತಿಯ ವಿಡಿಯೋಗಳು ಆಗಾಗ ವೈರಲ್ ಆಗ್ತಾನೇ ಇರುತ್ತೆ. ಚಿಕ್ಕಪುಟ್ಟ ಕೆಲಸಗಳಲ್ಲೂ ತಮ್ಮ ಪ್ರತಿಭೆ ಏನು ಅಂತ ಅನ್ನೊದನ್ನ ತೋರಿಸ್ತಿರ್ತಾರೆ. ಅವರು ಕೆಲಸ ಮಾಡೋ ರೀತಿ ನೋಡೇ ಈ ಕೆಲಸ ಹೀಗೂ ಮಾಡಹುದಾ ಅಂತ ಎಷ್ಟೋ ಜನರಿಗೆ ಅನ್ಸುತ್ತೆ.