ಕೊರೊನಾ ವೈರಸ್ ಅನೇಕ ಹೊಸ ಹೊಸ ಸಮಸ್ಯೆಗಳನ್ನು ಹುಟ್ಟು ಹಾಕ್ತಿದೆ. ಈಗ ಕೊರೊನಾ ಎದೆ ಹಾಲಿನ ಮೇಲೆ ಪರಿಣಾಮ ಬೀರುತ್ತದೆಯೇ ಎಂಬ ಹೊಸ ಆತಂಕ ಹುಟ್ಟುಹಾಕಿದೆ. ಕೊರೊನಾ ಸೋಂಕಿಗೆ ಒಳಗಾದ ನಂತರ, ತನ್ನ ಹಾಲಿನ ಬಣ್ಣವು ಬಿಳಿ ಬಣ್ಣದಿಂದ ಹಸಿರು ಬಣ್ಣಕ್ಕೆ ಬದಲಾಗಿದೆ ಎಂದು ಮಹಿಳೆಯೊಬ್ಬಳು ಹೇಳಿದ್ದಾಳೆ. ಆಕೆ ಎದೆ ಹಾಲಿನ ಫೋಟೋವನ್ನು ಹಂಚಿಕೊಂಡಿದ್ದಾಳೆ. ಒಂದು ಪೌಚ್ ನಲ್ಲಿ ಬಿಳಿ ಬಣ್ಣದ ಎದೆಹಾಲಿದ್ದರೆ ಇನ್ನೊಂದರಲ್ಲಿ ಹಸಿರು ಬಣ್ಣದ ಎದೆಹಾಲಿದೆ.
ಎರಡು ಮಕ್ಕಳ ತಾಯಿ ಅಶ್ಮಿರಿ ಈ ಪೋಟೋ ಹಂಚಿಕೊಂಡಿದ್ದಾಳೆ. ಸೋಂಕಿಗೆ ಒಳಗಾದ ನಂತ್ರ ನನ್ನ ಎದೆ ಹಾಲಿನ ಬಣ್ಣ ಬದಲಾಗಿದೆ ಎಂದು ಆಕೆ ಹೇಳಿದ್ದಾಳೆ. ಇದಲ್ಲದೆ ಆಕೆ ಬದಲಾದ ಎದೆ ಹಾಲನ್ನು ಸೇವನೆ ಮಾಡಿರುವುದಾಗಿಯೂ ಹೇಳಿದ್ದಾಳೆ. ನನ್ನ ಎದೆಹಾಲನ್ನು ನಾನು ಸೇವನೆ ಮಾಡಿದ್ದೇನೆ ಎನ್ನಲು ನನಗೆ ಮುಜುಗರವಿಲ್ಲ. ಎದೆ ಹಾಲಿನಿಂದ ಏನೆಲ್ಲ ಪ್ರಯೋಜನವಿದೆ ಎಂಬುದು ನಿಮಗೆಲ್ಲ ಗೊತ್ತು. ಆದ್ರೆ ಇದು ನನ್ನ ಆರೋಗ್ಯ ವೃದ್ಧಿಸಲು ನೆರವಾಗಿದೆಯೇ ಎಂಬುದು ನನಗೆ ಗೊತ್ತಿಲ್ಲವೆಂದು ಆಕೆ ಹೇಳಿದ್ದಾಳೆ.
ಆದ್ರೆ ಕೊರೊನಾ ನಂತ್ರ ಎದೆ ಹಾಲಿನ ಬಣ್ಣ ಬದಲಾಗುತ್ತದೆ ಎಂಬ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲವೆಂದು ತಜ್ಞರು ಹೇಳಿದ್ದಾರೆ. ಎದೆ ಹಾಲಿನ ಬಣ್ಣ ಬದಲಾಗಲು ಇಮ್ಯುನೊಗ್ಲಾಬ್ಯುಲಿನ್‌ಗಳು, ಬಿಳಿ ರಕ್ತ ಕಣಗಳು ಮತ್ತು ಲ್ಯುಕೋಸೈಟ್‌ಗಳ ಹೆಚ್ಚಳ ಕಾರಣವಾಗುತ್ತದೆ ಎಂದವರು ಹೇಳಿದ್ದಾರೆ.