ತಮ್ಮ ಇ-ಮೇಲ್ ಪ್ರೊಫೈಲ್‌ನ ಸ್ಪಾಮ್ ಫೋಲ್ಡರ್ ತಪಾಸಣೆ ಮಾಡುತ್ತಿದ್ದ ಮಹಿಳೆಯೊಬ್ಬರಿಗೆ ತಾವು $3 ದಶಲಕ್ಷ ಲಾಟರಿ ಬಹುಮಾನ ಗೆದ್ದಿರುವ ಸಂದೇಶವೊಂದು ಕಣ್ಣಿಗೆ ಬಿದ್ದು ಅಚ್ಚರಿಗೀಡಾಗಿದ್ದಾರೆ.
ಓಕ್ಲೆಂಡ್ ಕೌಂಟಿಯ ಲೌರಾ ಸ್ಪಿಯರ್ಸ್, ಡಿಸೆಂಬರ್ 3ರಂದು ಮಿಷಿಗನ್ ಲಾಟರಿಯ 1 ಮೆಗಾ ಮಿಲಿಯನ್ಸ್ ಡ್ರಾಯಿಂಗ್‌ನಲ್ಲಿ ಲಾಟರಿ ಖರೀದಿ ಮಾಡಿದ್ದರು. $1 ಮಿಲಿಯನ್ ಬಹುಮಾನ ಗೆದ್ದಿದ್ದ ಲೌರಾಗೆ ಮೆಗಾ ಪ್ಲೈಯರ್‌ನಿಂದಾಗಿ ಹೆಚ್ಚುವರಿ $2 ಮಿಲಿಯನ್ ಬಂಪರ್ ಹೊಡೆದಿದೆ.
BIG NEWS: ನಿರ್ಮಾಪಕ ಉಮಾಪತಿ ಹತ್ಯೆಗೆ ಸಂಚು ಪ್ರಕರಣ; ಇಬ್ಬರು ಆರೋಪಿಗಳು ಅರೆಸ್ಟ್
$2 ತೆತ್ತು ಮೆಗಾ ಮಿಲಿಯನ್ಸ್ ಆಟಕ್ಕೆ ಬರುವವರು ಲಾಟರಿಯಲ್ಲಿ ಗೆದ್ದ ದುಡ್ಡಿನ ಕೆಲ ಪಟ್ಟು ಹೆಚ್ಚು ಮೊತ್ತ ಪಡೆಯುವ ಸಾಧ್ಯತೆ ಇರಬಹುದು. ಇಂಥ ಒಂದು ಮೆಗಾಪ್ಲೈಯರ್ ಅನ್ನು ಲೌರಾ ಖರೀದಿ ಮಾಡಿದ್ದರು.
“ಮೆಗಾ ಮಿಲಿಯನ್ಸ್ ಜಾಕ್‌ಪಾಟ್ ಸಿಕ್ಕಾಪಟ್ಟೆ ಹೆಚ್ಚಾಗುತ್ತಿದೆ ಎಂದು ಫೇಸ್‌ಬುಕ್‌ನಲ್ಲಿ ಜಾಹೀರಾತೊಂದನ್ನು ನೋಡಿದೆ. ಹಾಗಾಗಿ ನನ್ನ ಅಕೌಂಟ್ ಮೂಲಕ ಒಂದು ಟಿಕೆಟ್ ಖರೀದಿ ಮಾಡಿದೆ. ಕೆಲ ದಿನಗಳ ಬಳಿಕ, ಯಾರದ್ದೋ ಒಂದು ಮಿಸ್ಸಿಂಗ್ ಇ-ಮೇಲ್ ಚೆಕ್ ಮಾಡಲು ನನ್ನ ಇಮೇಲ್ ಖಾತೆಯ ಸ್ಪಾಮ್ ಫೋಲ್ಡರ್ ತೆರೆದು ನೋಡಿದೆ. ಆಗ ನನ್ನ ಕಣ್ಣಿಗೆ ಲಾಟರಿಯಿಂದ ಬಂದ ಇಮೇಲ್ ಒಂದು ನಾನು ಬಹುಮಾನ ಗೆದ್ದಿರುವ ವಿಚಾರ ತಿಳಿಸಿತು. ನಾನು ಏನು ಓದುತ್ತಿದ್ದೇನೆ ಎಂದು ಮೊದಲಿಗೆ ನಂಬಲು ಆಗಲಿಲ್ಲ. ನಾನು ನಿಜಕ್ಕೂ $3 ಮಿಲಿಯನ್ ಗೆದ್ದೆ ಎಂಬುದು ಇನ್ನೂ ಶಾಕಿಂಗ್ ಆಗಿದೆ,” ಎಂದಿದ್ದಾರೆ ಲೌರಾ.
ತಮ್ಮ ಬಹುಮಾನದ ಮೊತ್ತವನ್ನು ಕ್ಲೇಂ ಮಾಡಲು ಲಾಟರಿ ಪ್ರಧಾನ ಕಚೇರಿಗೆ ಭೇಟಿ ನೀಡಿದ್ದಾರೆ ಲೌರಾ. ಈ ಬಹುಮಾನದಿಂದಾಗಿ ತಮ್ಮ ನಿವೃತ್ತಿಯನ್ನು ಇನ್ನಷ್ಟು ಬೇಗ ಪ್ಲಾನ್ ಮಾಡಲು ಸಹಾಯವಾಗಿದೆ ಎಂದಿದ್ದಾರೆ ಲೌರಾ.