
ಅದೆಷ್ಟು ಪುಟ್ಟ ಹಾವು ನೋಡಿದರೂ ಜೀವವೇ ಬಾಯಿಗೆ ಬಂದಂತೆ ಆಗುವುದು ಎಲ್ಲರಲ್ಲೂ ಸಾಮಾನ್ಯ. ಆದರೆ ಕೆಲವೊಂದು ಅಸಾಧಾರಣ ಮಂದಿ ಹಾವುಗಳೊಂದಿಗೆ ಬೆಕ್ಕಿನ ಮರಿಯೊಂದಿಗೆ ಆಟವಾಡಿದಂತೆ ಆಡುವುದನ್ನು ನೋಡಿದರೆ ಮೈ ರೋಮಾಂಚನವಾಗುತ್ತದೆ.
ಮಹಿಳೆಯೊಬ್ಬರು ತಮ್ಮ ಚುರುಕುತನದಿಂದ ಬೃಹತ್ ಹಾವೊಂದನ್ನು ಬರಿಗೈಗಳಲ್ಲೇ ಹಿಡಿದು ಚೀಲಕ್ಕೆ ಹಾಕಿಕೊಳ್ಳುವ ವಿಡಿಯೋವೊಂದು ವೈರಲ್ ಆಗಿದೆ. ನಾಲ್ಕು ನಿಮಿಷಗಳ ಈ ವಿಡಿಯೋದಲ್ಲಿ, ಬರಿಗೈನಲ್ಲೇ ಹಾವನ್ನು ಹಿಡಿಯುವ ಈಕೆ, ಉರಗವು ತನ್ನ ಮೇಲೆ ದಾಳಿ ಮಾಡಲು ಬಂದಾಗ ಚಾಲಾಕಿತನದಿಂದ ಪಾರಾಗಿದ್ದಲ್ಲದೇ, ಅದನ್ನು ಸುರಕ್ಷಿತವಾಗಿ ಮನೆಯೊಂದರಿಂದ ಬೇರೆಡೆ ಕೊಂಡೊಯ್ದಿದ್ದಾರೆ.
ಮಕ್ಕಳನ್ನು ಶಾಲೆಗೆ ಸೇರಿಸುವ ಪೋಷಕರಿಗೆ ಗುಡ್ ನ್ಯೂಸ್
ದಾರಿಹೋಕರು ಈ ವಿಡಿಯೋ ಶೂಟ್ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಈ ವಿಡಿಯೋಗೆ 1.8 ಲಕ್ಷ ವೀವ್ಸ್‌ಗಳು ಸಿಕ್ಕಿದ್ದು, 1.3 ಲಕ್ಷ ಲೈಕ್ಸ್‌ಗಳು ಸಿಕ್ಕಿವೆ.