alex Certify ದೆವ್ವದ ಭಯಕ್ಕೆ ಮನೆಯನ್ನೇ ಖಾಲಿ ಮಾಡಿದೆ ಈ ಕುಟುಂಬ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೆವ್ವದ ಭಯಕ್ಕೆ ಮನೆಯನ್ನೇ ಖಾಲಿ ಮಾಡಿದೆ ಈ ಕುಟುಂಬ…!

ಅತಿಮಾನುಷ ಶಕ್ತಿ, ದೆವ್ವ, ಭೂತದ ಕಾಟವೆಂದು ಸಾಮಾಜಿಕ ಜಾಲತಾಣದಲ್ಲಿ ಅನೇಕ ವಿಡಿಯೋಗಳು, ಕಥೆಗಳು ಹರಿದಾಡುತ್ತವೆ. ರೆಡಿಟ್​ನಲ್ಲಿ ಈ ಸಾಲಿನ ವಿಡಿಯೋ ಕಾಣಿಸಿಕೊಂಡಿದ್ದು, ಇಲ್ಲಿ ನಾಯಿಯು ದೆವ್ವದ ಕಾಟಕ್ಕೆ ಸಿಲುಕಿದೆ ಎಂದು ಹೇಳಲಾಗುತ್ತಿದೆ.

ಏಳು ತಿಂಗಳ ಹಿಂದೆ ಜನಪ್ರಿಯ ಸಾಮಾಜಿಕ ಜಾಲತಾಣ ರೆಡ್ಡಿಟ್​ನಲ್ಲಿ ಈ ವಿಡಿಯೋ ಕಾಣಿಸಿಕೊಂಡಿತ್ತು. ಮಹಿಳೆಯೊಬ್ಬರು ವಿಡಿಯೋ ಹಂಚಿಕೊಂಡಿದ್ದು, ತಮ್ಮ ಮನೆ ಟಕರ್​ ಹೆಸರಿನ ನಾಯಿ ನೆಲದ ಮೇಲೆ ಏಕಾಏಕಿ ಜಾರಿಬೀಳುವುದನ್ನು ಸೆರೆಹಿಡಿದಿದ್ದಾರೆ.

ನಾಯಿಯ ಗಮನ ಬೇರೆ ಯಾವುದರೋ ಕಡೆ ಹರಿಯುವಂತೆ ಕಾಣಿಸುತ್ತದೆ, ಅದು ಇದ್ದಕ್ಕಿದ್ದಂತೆ ಬೊಗಳುತ್ತಾ ಹಿಂದೆ ಮುಂದೆ ಹೆಜ್ಜೆ ಹಾಕುತ್ತಿರುವಾಗ ಜಾರಿ ಬಿಡುತ್ತದೆ. ಕಾರ್ಪೆಟ್​ ಅನ್ನು ದಿಟ್ಟಿಸುತ್ತ ನಾಯಿ ಬೊಗಳಲು ಪ್ರಾರಂಭಿಸುತ್ತದೆ. ಇದ್ದಕ್ಕಿದ್ದಂತೆ ಅರ್ಧ ಮೀಟರ್​ ಜಾರುವವರೆಗೂ ಗೊಂದಲದಲ್ಲಿ ಬೊಗಳುವುದನ್ನು ಮುಂದುವರಿಸುತ್ತದೆ. ಅದು ಜಾರಲು ಕಾರಣವಾಗಬಹುದಾದ ಯಾವುದೇ ಬಲಪ್ರಯೋಗ ಅಲ್ಲಿ ಕಾಣಿಸುವುದಿಲ್ಲ. ನಾಯಿ ಬೊಗಳುವುದರೊಂದಿಗೆ ವೀಡಿಯೊ ಕೊನೆಗೊಳ್ಳುತ್ತದೆ

ವೀಡಿಯೊವನ್ನು ನೋಡುವವರೆಗೂ ತಮ್ಮ ನಾಯಿ ಜಾರಿದೆ ಎಂದು ಆಕೆಗೆ ತಿಳಿದಿರಲಿಲ್ಲ ಎಂದು ಬರೆದುಕೊಂಡಿದ್ದಾರೆ.

ಹಾಗೆಯೇ, ಮನೆಯಲ್ಲಿ ಇನ್ಯಾರೊಂದಿಗೂ ಇದ್ದೇವೆಂದು ಅನಿಸಿದ ಕೆಲವು ಉದಾಹರಣೆಯನ್ನು ಆಕೆ ನೀಡಿದ್ದಾರೆ. ಬೆಳಗಿನ ಜಾವ 3 ಗಂಟೆಗೆ ಆದ ಅನುಭವವನ್ನೂ ಹಂಚಿಕೊಂಡಿದ್ದಾರೆ. ಯಾರೋ ಕೊಠಡಿಯಲ್ಲಿ ಇದ್ದಂತೆ, ಅದು ತಮ್ಮ ಮಗು ಎಂದು ತಪ್ಪಾಗಿ ಭಾವಿಸಿದ್ದು, ಬಳಿಕ ಪರೀಕ್ಷಿಸಲು ಹೋದಾಗ ಆಶ್ಚರ್ಯಕರವಾಗಿ ಮೇಲಂತಸ್ತಿನಲ್ಲಿ ಮಗು ಗಾಢ ನಿದ್ದೆಯಲ್ಲಿತ್ತು. ಮರುದಿನ ರಾತ್ರಿ ಪತಿಗೂ ಇದೇ ಅನುಭವವಾಗಿತ್ತು. ಮನೆಯಲ್ಲಿ ಯಾರೋ ನಿಂತಿದ್ದನ್ನು ಕಂಡೆ ಎಂದು ಆತ ಹೇಳಿದ್ದರು.

ಈ ಘಟನೆಗಳಿಂದ ಆ ಕುಟುಂಬವು ಮನೆಯಿಂದ ಹೊರಬಂದಿದೆ. ವೀಡಿಯೊದಲ್ಲಿ ಸೆರೆಹಿಡಿಯಲಾದ ಘಟನೆಯಿಂದಾಗಿ ಅವರು ಸ್ಥಳಾಂತರಗೊಂಡಿದ್ದಾರೆಯೇ ಅಥವಾ ಇಲ್ಲವೇ ಎಂಬುದು ಸ್ಪಷ್ಟವಾಗಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...