
ಗದಗ: ಗದಗ ತಾಲೂಕಿನ ಕುರ್ತಕೋಟಿ ಮತ್ತು ನೀಲಗುಂದದಲ್ಲಿ ತೋಳ ದಾಳಿ ನಡೆಸಿದೆ. ಕುರ್ತಕೋಟಿ ಗ್ರಾಮದಲ್ಲಿ ಬಾಲಕಿ, ಆಕಳು, ನಾಯಿ ಮೇಲೆ ತೋಳ ದಾಳಿ ಮಾಡಿದೆ.
ನೀಲಗುಂದ ಗ್ರಾಮದಲ್ಲಿ ನಿತಿನ್ ಎಂಬ ಬಾಲಕನ ಮೇಲೆ ತೋಳ ದಾಳಿ ಮಾಡಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ತೋಳ ದಾಳಿಯಿಂದಾಗಿ ಕುರ್ತಕೋಟಿ ಮತ್ತು ನೀಲಗುಂದ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿ ಭೇಟಿ ನೀಡಿ ಶೋಧ ಕಾರ್ಯ ಕೈಗೊಂಡಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.