alex Certify ತನ್ನ ತಂದೆಯ ಫೋಟೋದೊಂದಿಗೆ ಮದುವೆ ಮಂಟಪದೆಡೆ ಹೆಜ್ಜೆ ಹಾಕಿದ ವಧು; ಹೃದಯಸ್ಪರ್ಶಿ ವಿಡಿಯೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತನ್ನ ತಂದೆಯ ಫೋಟೋದೊಂದಿಗೆ ಮದುವೆ ಮಂಟಪದೆಡೆ ಹೆಜ್ಜೆ ಹಾಕಿದ ವಧು; ಹೃದಯಸ್ಪರ್ಶಿ ವಿಡಿಯೋ ವೈರಲ್​

ಯಾವುದೇ ಹುಡುಗಿಯ ಜೀವನದಲ್ಲಿ ಮದುವೆಯು ಅತ್ಯಂತ ವಿಶೇಷ ಘಟನೆಗಳಲ್ಲಿ ಒಂದು. ತನ್ನ ಮದುವೆಯ ದಿನದಂದು ವಧು ಬಯಸುವುದು ಅವಳ ಪಕ್ಕದಲ್ಲಿ ತನ್ನ ಕುಟುಂಬ ಮತ್ತು ಆಪ್ತ ಸ್ನೇಹಿತರನ್ನು ಹೊಂದಿರುವುದು.

ಆದರೆ ಪ್ರಿಯಾಂಕಾ ಭಾಟಿ ಎಂಬಾಕೆ ಕೇವಲ 9 ವರ್ಷದವಳಿದ್ದಾಗ ತನ್ನ ತಂದೆಯನ್ನು ಕ್ಯಾನ್ಸರ್​ನಿಂದ ಕಳೆದುಕೊಂಡಳು. ಹೀಗಾಗಿ ಆಕೆ ತನ್ನ ಮದುವೆಯ ದಿನದಂದು, ತನ್ನ ಅಜ್ಜನೊಂದಿಗೆ ದಿಬ್ಬಣದಲ್ಲಿ ಹೋಗುವಾಗ ತಂದೆಯ ಫೋಟೋವನ್ನು ಹಿಡಿದು ಸಾಗಿದಳು. ಈ ಭಾವುಕ ಸನ್ನಿವೇಶದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ತನ್ನ ಅಜ್ಜ ತನ್ನನ್ನು ಹೇಗೆ ಬೆಂಬಲಿಸಿದರು ಮತ್ತು ತನ್ನ ತಂದೆಯ ಮರಣದ ನಂತರ ಯಾವಾಗಲೂ ಜೊತೆಯೇ ಇದ್ದರು ಎಂಬುದರ ಕುರಿತು ಪ್ರಿಯಾಂಕ ಇನ್ಸಾ ಗ್ರಾಮ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

ಇದೀಗ ವೈರಲ್​ ಆಗಿರುವ ವೀಡಿಯೋದಲ್ಲಿ ಪ್ರಿಯಾಂಕಾ ವಧುವಿನ ಅಲಂಕಾರದಲ್ಲಿದ್ದು ಕೈಯಲ್ಲಿ ತಂದೆಯ ಫೋಟೋದೊಂದಿಗೆ ನಡೆಯುವುದನ್ನು ನೋಡಬಹುದು. ಅವರಿಬ್ಬರೂ ಮದುವೆಯ ವಿಧಿವಿಧಾನಗಳಿಗಾಗಿ ಮಂಟಪದ ಕಡೆಗೆ ತೆರಳಿದಾಗ ಆಕೆ ತನ್ನ ಅಜ್ಜನನ್ನು ಹಿಡಿದಿದ್ದಳು. ಆಕೆಯ ಕಥೆಯನ್ನು ಹ್ಯೂಮನ್ಸ್​ ಆಫ್​ ಬಾಂಬೆ ತಮ್ಮ ಸಾಮಾಜಿಕ ಜಾಲತಾಣದ ಹ್ಯಾಂಡಲ್​ಗಳಲ್ಲಿ ಹಂಚಿಕೊಂಡಿದ್ದಾರೆ.

ಅಪ್ಪ ತೀರಿಕೊಂಡಾಗ ನನಗೆ 9 ವರ್ಷ. ಆದರೆ ನಾನು ಅವರೊಂದಿಗೆ ಕಳೆದ ಆ ಕೆಲವೇ ವರ್ಷಗಳಲ್ಲಿ, ಆತ ತನ್ನ ಮಗಳಿಗಾಗಿ ಸರ್ವಸ್ವವನ್ನು ನೀಡಿದ ವ್ಯಕ್ತಿಯಾಗಿ ನೋಡಿದೆ. ನಾನು ಮಾವಿನಹಣ್ಣುಗಳನ್ನು ಪ್ರೀತಿಸುತ್ತಿದ್ದೆ, ಬೇಸಿಗೆಯಲ್ಲಿ ಅವರು ಯಾವಾಗಲೂ ಮಾವಿನ ಹಣ್ಣನ್ನು ತುಂಬಿಕೊಂಡು ಮನೆಗೆ ಬರುತ್ತಿದ್ದರು. ಕೊನೆಯ 2 ವರ್ಷಗಳಲ್ಲಿ ಅವರಿಗೆ ಕ್ಯಾನ್ಸರ್​ ಇರುವುದು ಪತ್ತೆಯಾದಾಗ, ಅವರು ತಮ್ಮ ಹಾಸಿಗೆಯ ಮೇಲೆ ಹೆಚ್ಚಿನ ಸಮಯವನ್ನು ಕಳೆದರು, ವಿಶ್ರಾಂತಿ ಪಡೆಯುತ್ತಿದ್ದರು ಆದರೆ ಅವರು ಯಾವಾಗಲೂ ನನ್ನ ಬಗ್ಗೆ ಕೇಳುತ್ತಿದ್ದರು. ನಮ್ಮನ್ನು ತೊರೆದ ನಂತರ, ನಾನು ಅವರನ್ನು ಬಹಳ ಮಿಸ್​ ಮಾಡಿಕೊಂಡೆ. ಕುಟುಂಬದವರು ಅಪ್ಪನ ಅಂಗಡಿಯನ್ನು ನೋಡಿಕೊಳ್ಳತೊಡಗಿದರು ಎಂದು ಅವರು ಹೇಳಿದ್ದಾರೆ.

ಆದರೆ ದಾದಾಜಿ (ಅಜ್ಜ) ನನ್ನನ್ನು ಬೆಳೆಸಿದರು. ನಾನು ಅವರನ್ನು ತುಂಬಾ ಕಟ್ಟುನಿಟ್ಟಾದ ವ್ಯಕ್ತಿ ಎಂದು ತಿಳಿದಿದ್ದೆ, ಅವರ ಸುತ್ತಲೂ ಮಕ್ಕಳು ಆಟವಾಡಲು ಹೆದರುತ್ತಿದ್ದರು. ಆದರೆ ಅಪ್ಪನ ಕಾಲಾನಂತರ ಅವರು ಬಹಳ ಮೃದುವಾದರು. ನಾನು ಸರಿಯಾಗಿ ಅಧ್ಯಯನ ಮಾಡುತ್ತಿದ್ದೇನಾ, ನನಗೆ ಬೇಕಾದ ಎಲ್ಲವನ್ನೂ ಹೊಂದಿದ್ದೇನೆ ಎಂದು ಅಜ್ಜ ಖಚಿತಪಡಿಸಿಕೊಳ್ಳುತ್ತಿದ್ದರು ಎಂದು ಆಕೆ ತನ್ನ ಕತೆಯನ್ನು ಹೇಳಿಕೊಂಡಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...