alex Certify 14 ವರ್ಷದ ಈ ಬಾಸ್ಕೆಟ್​ ಬಾಲ್​ ಆಟಗಾರ್ತಿ ಎತ್ತರ ನೋಡಿದ್ರೆ ದಂಗಾಗ್ತೀರಾ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

14 ವರ್ಷದ ಈ ಬಾಸ್ಕೆಟ್​ ಬಾಲ್​ ಆಟಗಾರ್ತಿ ಎತ್ತರ ನೋಡಿದ್ರೆ ದಂಗಾಗ್ತೀರಾ….!

ಚೀನಾದ 14 ವರ್ಷದ ಬಾಲಕಿ ಝಾಂಗ್​ ಜಿಯು ತನ್ನ ಬಾಸ್ಕೆಟ್​ ಬಾಲ್​ ಆಟದ ಮೂಲವೇ ಸೋಶಿಯಲ್​ ಮೀಡಿಯಾದಲ್ಲಿ ವ್ಯಾಪಕ ಮೆಚ್ಚುಗೆ ಗಳಿಸುತ್ತಿದ್ದಾಳೆ. ಚೀನಾದ ಅಂಡರ್​ 15 ಚಾಂಪಿಯನ್​​ಶಿಪ್​ನಲ್ಲಿ ಈಕೆ ತನ್ನ ತಂಡಕ್ಕೆ 42 ಅಂಕಗಳನ್ನ ಒದಗಿಸಿಕೊಟ್ಟಿದ್ದಾಳೆ.

ಈಕೆ ಪಂದ್ಯವಾಡಿದ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಅಂದಹಾಗೆ ಈಕೆಯ ಎತ್ತರ ಬರೋಬ್ಬರಿ 7 ಅಡಿ 4 ಇಂಚು..!. ಕೇವಲ 14 ವರ್ಷ ವಯಸ್ಸಿಗೆ ಈಕೆ ಅಸಾಮಾನ್ಯ ಎತ್ತರವನ್ನ ಹೊಂದಿದ್ದಾಳೆ.

ಮಧ್ಯಪ್ರದೇಶ: ಬಾವಿಗೆ ಬಿದ್ದು ಮೃತಪಟ್ಟವರ ಸಂಖ್ಯೆ 11 ಕ್ಕೆ ಏರಿಕೆ, ಪರಿಹಾರ ಘೋಷಿಸಿದ ಮೋದಿ

ಚೀನಾದ ಜಿಂಗ್​​ಗ್ಜೋ ಎಂಬಲ್ಲಿ ಈ ಪಂದ್ಯ ನಡೆದಿದ್ದು ಇದರ ವಿಡಿಯೋಗಳನ್ನ ಮೊದಲು ವೇಬೋದಲ್ಲಿ ಶೇರ್​ ಮಾಡಲಾಗಿತ್ತು. ಜಿಯು ಆಟವನ್ನ ಚೀನಾದ ಸ್ಟಾರ್​ ಬಾಸ್ಕೆಟ್​ ಬಾಲ್​ ಆಟಗಾರ ಯಾ ಮಿಂಗ್​ಗೆ ಹೋಲಿಕೆ ಮಾಡಲಾಗುತ್ತಿದೆ. ವಿಶೇಷ ಅಂದರೆ ಇವರಿಬ್ಬರೂ ಒಂದೇ ಎತ್ತರವನ್ನ ಹೊಂದಿದ್ದಾರೆ. ಬಾಸ್ಕೆಟ್ ಬಾಲ್​ ಆಟ ಅನ್ನೋದು ಜಿಯು ರಕ್ತದಲ್ಲೇ ಇದೆ ಎಂದರೆ ತಪ್ಪಾಗಲಾರದು. ಏಕೆಂದರೆ ಜಿಯು ತಂದೆ – ತಾಯಿ ಕೂಡ ಬಾಸ್ಕೆಟ್​ಬಾಲ್​ ಆಟಗಾರರು. ಈಕೆಯ ತಂದೆ 6 ಅಡಿ 9 ಇಂಚು ಎತ್ತರವಿದ್ರೆ ತಾಯಿ 6 ಅಡಿ 4 ಇಂಚು ಎತ್ತರ ಹೊಂದಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...