ಚೀನಾದ 14 ವರ್ಷದ ಬಾಲಕಿ ಝಾಂಗ್ ಜಿಯು ತನ್ನ ಬಾಸ್ಕೆಟ್ ಬಾಲ್ ಆಟದ ಮೂಲವೇ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಮೆಚ್ಚುಗೆ ಗಳಿಸುತ್ತಿದ್ದಾಳೆ. ಚೀನಾದ ಅಂಡರ್ 15 ಚಾಂಪಿಯನ್ಶಿಪ್ನಲ್ಲಿ ಈಕೆ ತನ್ನ ತಂಡಕ್ಕೆ 42 ಅಂಕಗಳನ್ನ ಒದಗಿಸಿಕೊಟ್ಟಿದ್ದಾಳೆ.
ಈಕೆ ಪಂದ್ಯವಾಡಿದ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಂದಹಾಗೆ ಈಕೆಯ ಎತ್ತರ ಬರೋಬ್ಬರಿ 7 ಅಡಿ 4 ಇಂಚು..!. ಕೇವಲ 14 ವರ್ಷ ವಯಸ್ಸಿಗೆ ಈಕೆ ಅಸಾಮಾನ್ಯ ಎತ್ತರವನ್ನ ಹೊಂದಿದ್ದಾಳೆ.
ಮಧ್ಯಪ್ರದೇಶ: ಬಾವಿಗೆ ಬಿದ್ದು ಮೃತಪಟ್ಟವರ ಸಂಖ್ಯೆ 11 ಕ್ಕೆ ಏರಿಕೆ, ಪರಿಹಾರ ಘೋಷಿಸಿದ ಮೋದಿ
ಚೀನಾದ ಜಿಂಗ್ಗ್ಜೋ ಎಂಬಲ್ಲಿ ಈ ಪಂದ್ಯ ನಡೆದಿದ್ದು ಇದರ ವಿಡಿಯೋಗಳನ್ನ ಮೊದಲು ವೇಬೋದಲ್ಲಿ ಶೇರ್ ಮಾಡಲಾಗಿತ್ತು. ಜಿಯು ಆಟವನ್ನ ಚೀನಾದ ಸ್ಟಾರ್ ಬಾಸ್ಕೆಟ್ ಬಾಲ್ ಆಟಗಾರ ಯಾ ಮಿಂಗ್ಗೆ ಹೋಲಿಕೆ ಮಾಡಲಾಗುತ್ತಿದೆ. ವಿಶೇಷ ಅಂದರೆ ಇವರಿಬ್ಬರೂ ಒಂದೇ ಎತ್ತರವನ್ನ ಹೊಂದಿದ್ದಾರೆ. ಬಾಸ್ಕೆಟ್ ಬಾಲ್ ಆಟ ಅನ್ನೋದು ಜಿಯು ರಕ್ತದಲ್ಲೇ ಇದೆ ಎಂದರೆ ತಪ್ಪಾಗಲಾರದು. ಏಕೆಂದರೆ ಜಿಯು ತಂದೆ – ತಾಯಿ ಕೂಡ ಬಾಸ್ಕೆಟ್ಬಾಲ್ ಆಟಗಾರರು. ಈಕೆಯ ತಂದೆ 6 ಅಡಿ 9 ಇಂಚು ಎತ್ತರವಿದ್ರೆ ತಾಯಿ 6 ಅಡಿ 4 ಇಂಚು ಎತ್ತರ ಹೊಂದಿದ್ದಾರೆ.