alex Certify BIG NEWS: 2023ರ ಅಂತ್ಯಕ್ಕೆ ಭಕ್ತರಿಗೆ ತೆರೆದುಕೊಳ್ಳಲಿದೆ ಭವ್ಯ ರಾಮಮಂದಿರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: 2023ರ ಅಂತ್ಯಕ್ಕೆ ಭಕ್ತರಿಗೆ ತೆರೆದುಕೊಳ್ಳಲಿದೆ ಭವ್ಯ ರಾಮಮಂದಿರ

With Eco-Friendly Campus, Ayodhya Ram Temple to be Open for Devotees by End of 2023

ಅಯೋಧ್ಯೆಯ ಭವ್ಯ ರಾಮ ಮಂದಿರವನ್ನು ಪರಿಸರ ಸ್ನೇಹಿ ವಾಸ್ತುಶಿಲ್ಪದಲ್ಲಿ ನಿರ್ಮಿಸಲಾಗುತ್ತಿದ್ದು, 2023ರ ಅಂತ್ಯಕ್ಕೆ ಸಾಮಾನ್ಯ ಭಕ್ತರಿಗೆ ಲೋಕಾರ್ಪಣೆಯಾಗುವ ಸಾಧ್ಯತೆ ಇದೆ.

ಸದ್ಯ ದೇವಸ್ಥಾನದ ಪಾಯ ತೋಡುವ ಕೆಲಸದಲ್ಲಿ ಇಂಜಿನಿಯರ್‌ಗಳು ಕೆಲಸ ಮಾಡುತ್ತಿದ್ದು, ಈ ಕೆಲಸ ಸೆಪ್ಟೆಂಬರ್‌ 15ಕ್ಕೆ ಮುಕ್ತಾಯವಾಗುವ ನಿರೀಕ್ಷೆ ಇದೆ. ಎರಡನೇ ಹಂತದ ನಿರ್ಮಾಣ ಕಾರ್ಯ ನವೆಂಬರ್‌ನಲ್ಲಿ ಆರಂಭವಾಗುವ ನಿರೀಕ್ಷೆಯಿದೆ. 70 ಎಕರೆಯಲ್ಲಿ ಇರಲಿರುವ ಈ ದೇವಸ್ಥಾನದ ಆವರಣದ ಅಷ್ಟೂ ನಿರ್ಮಾಣ ಕೆಲಸ 2025ಕ್ಕೆ ಅಂತ್ಯವಾಗುವ ನಿರೀಕ್ಷೆ ಇದೆ.

ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ 15 ಮಂದಿ ಸದಸ್ಯರ ಮಹತ್ವದ ಭೇಟಿಯ ಬಳಿಕ ಈ ಸಂಬಂಧ ಘೋಷಣೆ ಹೊರಬಿದ್ದಿದೆ.

ದೇವಸ್ಥಾನದ ಪಾಯ ನಿರ್ಮಾಣ ಕಾರ್ಯಕ್ಕೆ ಆಗಸ್ಟ್‌ 2020ರಲ್ಲಿ ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ನೆರವೇರಿಸಿದ್ದರು. ದೇಗುಲ ನಿರ್ಮಾಣದ ಜಾಗದಲ್ಲಿ ನೀರು ಕಂಡುಬಂದ ಬಳಿಕ ಈ ವರ್ಷದ ಜನವರಿಯಲ್ಲಿ ನಿರ್ಮಾಣ ಕಾರ್ಯವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...