alex Certify ಮತ್ತೊಮ್ಮೆ ನಂ.1 ಜಾಗತಿಕ ನಾಯಕರಾಗಿ ಹೊರಹೊಮ್ಮಿದ ಮೋದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮತ್ತೊಮ್ಮೆ ನಂ.1 ಜಾಗತಿಕ ನಾಯಕರಾಗಿ ಹೊರಹೊಮ್ಮಿದ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರನ್ನು ಇಷ್ಟಪಡುವವರ ಸಂಖ್ಯೆ ಭಾರತದಲ್ಲಿ ಬಹಳವೇ ಇದೆ. ಆದರೆ ವಿಶ್ವಾದ್ಯಂತ ಯುವಕರು ಕೂಡ ಮೋದಿ ಅವರ ವ್ಯಕ್ತಿತ್ವಕ್ಕೆ ಮಾರುಹೋಗಿ, ಅವರ ನಾಯಕತ್ವದ ಮೇಲೆ ವಿಶ್ವಾಸ ಇರಿಸಿದ್ದಾರೆ ಎಂದು ಇತ್ತೀಚಿನ ಜಾಗತಿಕ ಸಮೀಕ್ಷೆಯೊಂದು ಬಹಿರಂಗಪಡಿಸಿದೆ.

ಸಮೀಕ್ಷೆಯಲ್ಲಿ ಭಾಗಿಯಾದ ಯುವಕರ ಪೈಕಿ ಶೇ. 70ರಷ್ಟು ಮಂದಿ ನರೇಂದ್ರ ಮೋದಿ ಅವರ ನಾಯಕತ್ವವನ್ನು ಒಪ್ಪಿಕೊಂಡು, ಅವರ ಮೇಲೆ ಅಪಾರ ಭರವಸೆ ಇರಿಸಿದ್ದಾರೆ.

ಅಮೆರಿಕ ಅಧ್ಯಕ್ಷ ಜೋ ಬೈಡೆನ್, ಜರ್ಮನಿ ಪ್ರಧಾನಿ ಏಂಜೆಲಾ ಮರ್ಕೆಲ್ ಮರ್ಕೆಲ್, ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್ ಅವರ ಮೇಲೆ ಕೂಡ ಯುವಕರು ಇಷ್ಟೊಂದು ವಿಶ್ವಾಸ ಇರಿಸಿಲ್ಲ ಎನ್ನುವುದು ಗಮನಾರ್ಹ ಸಂಗತಿ.

ʼಬಾರ್ಬಿ ಡಾಲ್‌ʼ ನಂತೆ ಕಾಣಲು ಪ್ಲಾಸ್ಟಿಕ್ ಸರ್ಜರಿಗಾಗಿ ಬರೋಬ್ಬರಿ 24 ಲಕ್ಷ ರೂಪಾಯಿ ಖರ್ಚು ಮಾಡಿದ ಮಹಿಳೆ

ಗ್ಲೋಬಲ್ ಅಪ್ರೂವಲ್ ರೇಟಿಂಗ್ಸ್ ಪ್ರಕಾರ ಮೋದಿ ಅವರ ನಂತರದ ಸ್ಥಾನವು ಮೆಕ್ಸಿಕೊ ಅಧ್ಯಕ್ಷ ಆ್ಯಂಡ್ರೀಸ್ ಮ್ಯಾನುಯೆಲ್ ಲೊಪೆಜ್ ಒಬ್ರಡರ್ ಅವರಿಗೆ (64%) ಸಿಕ್ಕಿದೆ. ಮೂರನೇ ಸ್ಥಾನದಲ್ಲಿ ಇಟಲಿ ಪ್ರಧಾನಿ ಮರಿಯೊ ದ್ರಾಘಿ (63%) ಇದ್ದಾರೆ. ನಂತರದಲ್ಲಿ ಜರ್ಮನಿ ಪ್ರಧಾನಿ ಏಂಜೆಲಾ ಮರ್ಕೆಲ್ (52%), ಅಮೆರಿಕ ಅಧ್ಯಕ್ಷ ಜೋ ಬೈಡೆನ್ (48%) ಹಾಗೂ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸ್ಸನ್ (48%) ಇದ್ದಾರೆ.

ಮಾರ್ನಿಂಗ್ ಕನ್ಸಲ್ಟ್ ಎಂಬ ಅಮೆರಿಕದ ಮಾಹಿತಿ ಸಂಗ್ರಹ ಸಂಸ್ಥೆಯು ಈ ರೇಟಿಂಗ್‍ಗಳನ್ನು ನೀಡಿದೆ. ಸತತ ಏಳು ದಿನಗಳ ಕಾಲ ಎಲ್ಲ ದೇಶಗಳಲ್ಲಿನ ಯುವ ನಿವಾಸಿಗರನ್ನು ಮಾತನಾಡಿಸಿ, ಈ ಮಾಹಿತಿ ಸಂಗ್ರಹಿಸಲಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...