alex Certify ವರ್ಚುವಲ್ ಸಭೆಯಲ್ಲೆ ಸಮಾಜವಾದಿ ಪಕ್ಷದ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವರ್ಚುವಲ್ ಸಭೆಯಲ್ಲೆ ಸಮಾಜವಾದಿ ಪಕ್ಷದ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ…..!

ಉತ್ತರ ಪ್ರದೇಶದ ಮೊದಲ ಹಂತದ ಚುನಾವಣೆಗೆ ಮೂರು ದಿನಗಳು ಬಾಕಿ ಇರುವಾಗ, ಫೆಬ್ರವರಿ 7 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಸಮಾಜವಾದಿ ಪಕ್ಷದ ವಿರುದ್ಧ ಮತ್ತೆ ತಮ್ಮ ವಾಗ್ದಾಳಿ ನಡೆಸಿದ್ದಾರೆ. ಬಿಜ್ನೋರ್ ರ್ಯಾಲಿಯಲ್ಲಿ ವರ್ಚುವಲ್ ಆಗಿ ಭಾಗವಹಿಸಿದ್ದ ಅವರು, ಸಮಾಜವಾದಿ ಪಕ್ಷವನ್ನ ನಕಲಿ ಎಂದಿದ್ದಾರೆ. ಎಸ್‌ಪಿ ಆಡಳಿತದಲ್ಲಿ ಯುಪಿಯು ಗುಂಡಾರಾಜ್ ಆಗಿ, ದುಃಸ್ಥಿತಿಗೆ ಸಮಾನವಾಗಿತ್ತು ಎಂದಿದ್ದಾರೆ.

ಸಿಎಂ ಯೋಗಿ ಅವರ ಅಧಿಕಾರಾವಧಿಯಲ್ಲಿ ಕ್ರಿಮಿನಲ್‌ಗಳೇ ಜೈಲಿಗೆ ಓಡಿ ಬಂದು ಬೀಗ ಹಾಕುವಂತೆ ಒತ್ತಾಯಿಸುತ್ತಿದ್ದಾರೆ. ಆದರೆ ಚುನಾವಣೆಯಲ್ಲಿ ಗೆಲ್ಲಬಹುದೆಂಬ ಆಶಯದಲ್ಲಿ ಎಸ್‌ಪಿ ನಾಯಕರು ಚುನಾವಣೆಗಾಗಿ ಕಾಯುತ್ತಿದ್ದಾರೆ. ಆಡಳಿತ ಬದಲಾವಣೆಯಾದಾಗ ಜೈಲಿನಿಂದ ಹೊರಬಂದು ಜನರ ಮೇಲೆ ಸೇಡು ತೀರಿಸಿಕೊಳ್ಳಬಹುದು ಎಂಬುದು ಅವರ ಆಶಯ, ಎಂದು ಪ್ರಧಾನಿ ಮೋದಿ ಜೈಲಿನಲ್ಲಿರುವ ಎಸ್‌ಪಿ ನಾಯಕ ಅಜಂ ಖಾನ್ ಅವರನ್ನು ಸ್ಪಷ್ಟ ಉಲ್ಲೇಖಿಸಿ ಸಮಾಜವಾದಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಉತ್ತರ ಪ್ರದೇಶದಲ್ಲಿ 2017ರಿಂದಲೆ ನಕಲಿ ಸಮಾಜವಾದಿ ರಾಜವಂಶದ ನೀತಿಗಳು ಅಭಿವೃದ್ಧಿ ಕಾಣುವುದನ್ನ ನಿಲ್ಲಿಸಿವೆ ಎಂದಿರುವ ಪ್ರಧಾನಿ, ಯೋಗಿ ಆದಿತ್ಯನಾಥ್ ಸರ್ಕಾರವು ಯಾವುದೇ ತಾರತಮ್ಯವಿಲ್ಲದೆ ರಾಜ್ಯದ ಎಲ್ಲಾ ಪ್ರದೇಶಗಳನ್ನು ಸಮಾನವಾಗಿ ಅಭಿವೃದ್ಧಿಪಡಿಸುತ್ತಿದೆ ಎಂದು ಶ್ಲಾಘಿಸಿದ್ದಾರೆ.

ಪ್ರಧಾನಿ ಮೋದಿ ಬಿಜ್ನೋರ್ ರ್ಯಾಲಿಯಲ್ಲಿ ಭೌತಿಕವಾಗಿ ಭಾಗಿಯಾಗಬೇಕಿತ್ತು ಆದರೆ, ಪ್ರತಿಕೂಲ ಹವಾಮಾನದ ಕಾರಣ ಅವರ ಹೆಲಿಕಾಪ್ಟರ್ ಟೇಕಾಫ್ ಆಗಲಿಲ್ಲ. ಈ ಕಾರಣದಿಂದ ವರ್ಚುವಲ್ ಸಭೆಯಲ್ಲಿಯೆ ಭಾಗವಹಿಸಿದ್ದರು.

ಯೋಗಿ ಆದಿತ್ಯನಾಥ್ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಹೊಗಳಿದ ಮೋದಿ, ಯೋಗಿ ಸರ್ಕಾರ ರೈತರ 1.5 ಲಕ್ಷ ಕೋಟಿ ರೂ.ಗೂ ಹೆಚ್ಚು ಕಬ್ಬಿನ ಬಾಕಿಯನ್ನು ಪಾವತಿಸಿದೆ. ಇದು ಯುಪಿಯಲ್ಲಿನ ಹಿಂದಿನ ಎರಡು ಸರ್ಕಾರಗಳು ಪಾವತಿಸಿದ ಹಣಕ್ಕಿಂತ ಹೆಚ್ಚು. ಹಿಂದಿನ ಸರ್ಕಾರಗಳು ಮಾಡಿದ್ದು ತಮ್ಮ ಮತ್ತು ತಮ್ಮ ಆತ್ಮೀಯರ ದಾಹವನ್ನು ನೀಗಿಸಿಕೊಳ್ಳುವುದು. ತಮ್ಮ ಬೊಕ್ಕಸ ತುಂಬಿಸಿಕೊಳ್ಳುವುದೆ ಅವರ ಧ್ಯೇಯವಾಗಿತ್ತು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ರಾಷ್ಟ್ರವು ಸ್ವಾತಂತ್ರ್ಯದ 100 ವರ್ಷಗಳನ್ನು ಪೂರ್ಣಗೊಳಿಸಿದಾಗ ಅಂದರೆ ಮುಂದಿನ 25 ವರ್ಷಗಳಲ್ಲಿ, ಯುಪಿ ತನ್ನ ಅಭಿವೃದ್ಧಿಯ ಕಥೆಯೊಂದಿಗೆ ಎಲ್ಲೆಡೆ ಛಾಪು ಮೂಡಿಸುತ್ತದೆ. ಇಲ್ಲಿನ ಉದ್ಯಮಿಗಳು, ಕೈಗಾರಿಕೋದ್ಯಮಿಗಳು ಮತ್ತು ರೈತರಿಗೆ ಎಲ್ಲಾ ಸಹಾಯ ಸಿಗುವಂತೆ ನೋಡಿಕೊಳ್ಳಲು ನಮ್ಮ ಸರ್ಕಾರ ನಿರಂತರ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಪ್ರಧಾನಿ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...