ಚಳಿಗಾಲವಾಗಲೇ ಪ್ರವೇಶಿಸಿ ತಿಂಗಳಾಗುತ್ತಾ ಬಂದ್ದಿದ್ದು, ಇನ್ನು ಮುಂದೆ ತೀವ್ರವಾದ ಚಳಿಯ ಅನುಭವವಾಗಲಿದೆ. ಇದೇ ವೇಳೆ, ನಿಮ್ಮ ಆರೋಗ್ಯದಷ್ಟೇ ನಿಮ್ಮ ಕಾರಿನ ಆರೋಗ್ಯದ ಕಾಳಜಿಯನ್ನು ಮಾಡಬೇಕಾಗುತ್ತದೆ.
ಈ ವಾತಾವರಣದಲ್ಲಿ ನಿಮ್ಮ ಕಾರನ್ನು ಚೆನ್ನಾಗಿ ಓಡುವಂತೆ ಇಟ್ಟುಕೊಳ್ಳಲು ಇಲ್ಲೊಂದಷ್ಟು ಮುಖ್ಯವಾದ ಸಲಹೆ-ಸೂಚನೆಗಳನ್ನು ತಜ್ಞರು ನೀಡಿದ್ದಾರೆ:
ಅಮೆರಿಕಾದ ಅಲಾಸ್ಕಾದಲ್ಲಿ ಪ್ರಬಲ ಭೂಕಂಪನ
1. ಬ್ಯಾಟರಿ ಆರೋಗ್ಯ
ಚಳಿಗಾಲದಲ್ಲಿ ಕಾರುಗಳಿಗೆ ಸ್ಟಾರ್ಟಿಂಗ್ ಸಮಸ್ಯೆ ಸಿಕ್ಕಾಪಟ್ಟೆ ಇರುತ್ತದೆ. ಬ್ಯಾಟರಿಯಲ್ಲಿರುವ ಭಟ್ಟಿ ಇಳಿಸಿದ ನೀರು ಹೆಪ್ಪುಗಟ್ಟಿದ ವೇಳೆ ಹೀಗೆ ಆಗುವುದು ಸಹಜ. ಹಳೆಯ ಹಾಗೂ ಸವೆದ ಬ್ಯಾಟರಿಗಳನ್ನು ಹೊಂದಿರುವ ವಾಹನಗಳಲ್ಲಿ ಈ ಸಮಸ್ಯೆ ಇನ್ನೂ ಹೆಚ್ಚೇ. ಒಂದು ವೇಳೆ ನಿಮ್ಮ ಕಾರಿನ ಬ್ಯಾಟರಿ ಬೇಸಿಗೆಯಲ್ಲೂ ದುರ್ಬಲವಾಗಿದ್ದರೆ ಮೊದಲು ಅದನ್ನು ಬದಲಿಸಿ, ಇಲ್ಲ ರೀಚಾರ್ಜ್ ಮಾಡಿಸಿ. ಯಾವುದಕ್ಕೂ ಜೊತೆಗೆ ಜಂಪರ್ ಕೇಬಲ್‌ಗಳನ್ನು ಇಟ್ಟುಕೊಂಡಿರಿ.
2. ಚಕ್ರದ ಗಾಳಿ ಒತ್ತಡ ಮತ್ತು ತ್ರೆಡ್ ಆಳ
ಇಬ್ಬನಿ ಮತ್ತು ಮಂಜಿನಿಂದ ಚಳಿಗಾಲದಲ್ಲಿ ರಸ್ತೆಗಳು ಜಾರುತ್ತವೆ. ಹೀಗಾಗಿ ವಾಹನಗಳಿಗೆ ರಸ್ತೆಯ ಮೇಲೆ ಗ್ರಿಪ್ ಸಿಗುವುದು ಕಡಿಮೆಯಾಗುತ್ತದೆ. ನಿಮ್ಮ ಕಾರಿನ ಚಕ್ರಗಳಲ್ಲಿ ಸೂಕ್ತವಾದ ತ್ರೆಡ್ ಆಳವಿಲ್ಲದೇ ಇದ್ದರೆ ಪರಿಣಾಮಕಾರಿ ಬ್ರೇಕಿಂಗ್ ಮಾಡಲು ಕಷ್ಟವಾಗುತ್ತದೆ. ನಿಮ್ಮ ಟೈರ್‌ನಲ್ಲಿರುವ ತ್ರೆಡ್ ಆಳವು 1.6 ಎಂಎಂಗಿಂತ ಕಡಿಮೆ ಇದ್ದರೆ, ಹೊಸ ಚಕ್ರಗಳನ್ನು ತೆಗೆದುಕೊಳ್ಳವುದು ಸೂಕ್ತ.
ಇದರೊಂದಿಗೆ ನಿಮ್ಮ ಚಕ್ರಗಳಲ್ಲಿ ಗಾಳಿಯ ಒತ್ತಡ ಸಾಕಷ್ಟು ಪ್ರಮಾಣದಲ್ಲಿರುವುದನ್ನು ಖಾತ್ರಿ ಮಾಡಿಕೊಳ್ಳಬೇಕು.
3. ಇಂಜಿನ್ ಬೆಚ್ಚಗಾಗಿಸುವುದು
ಚಳಿಗಾಲದಲ್ಲಿ ನಿಮ್ಮ ಕಾರನ್ನು ಚಾಲನೆ ಮಾಡುವ ಮುನ್ನ ಅದಕ್ಕೆ ಸ್ವಲ್ಪ ರೆವ್‌ಗಳನ್ನು ಮಾಡಲು ಬಿಡಿ. ಇದರಿಂದ ಇಂಜಿನ್ ಬೆಚ್ಚಗೆ ಆಗುವುದಲ್ಲದೇ ಪವರ್‌ಪ್ಲಾಂಟ್‌ನ ಪ್ರತಿ ಮೂಲೆಗೆ ತೈಲ ತಲುಪಿ ಸರಿಯಾಗಿ ಲೂಬ್ರಿಕೇಟ್ ಆಗುತ್ತದೆ.
4. ಹೆಪ್ಪುಗಟ್ಟದಂತೆ ನೋಡಿಕೊಳ್ಳುವುದು
ಒಂದು ವೇಳೆ ನೀವೇನಾದರೂ ಶೂನ್ಯ ಡಿಗ್ರೀ ತಾಪಮಾನಕ್ಕಿಂತ ಕಡಿಮೆ ತಾಪಮಾನ ಇರುವ ಜಾಗದಲ್ಲಿ ವಾಸಿಸುತ್ತಿದ್ದರೆ, ನಿಮ್ಮ ಇಂಜಿನ್‌ನ ಕೂಲಿಂಗ್ ವ್ಯವಸ್ಥೆಯನ್ನು ಹೆಪ್ಪುಗಟ್ಟದಂತೆ ಮಾಡಿಸಿ. ಹೀಗೆ ಮಾಡುವುದರಿಂದ ಇಂಜಿನ್ ಒಳಗಿನ ನೀರಿನ ಹೆಪ್ಪುಗಟ್ಟುವಿಕೆಯ ಬಿಂದು ಇನ್ನಷ್ಟು ಕಡಿಮೆಯಾಗಿ, ನೀರು ಹೆಪ್ಪುಗಟ್ಟಿದಾಗ ಹಿಗ್ಗಿ ಇಂಜಿನ್ ಒಳಗೆ ಆಗುವ ಆಂತರಿಕ ಡ್ಯಾಮೇಜ್‌ಗಳನ್ನು ತಡೆಗಟ್ಟಬಹುದಾಗಿದೆ.
5. ಹೆಡ್‌ಲೈಟ್
ಮಂಜು ಹಾಗೂ ಇಬ್ಬನಿಯಿಂದಾಗಿ ಹೆದ್ದಾರಿಗಳಲ್ಲಿ ಸಂಚರಿಸುವ ವೇಳೆ ಮುಂದಿನ ದಾರಿ ಸರಿಯಾಗಿ ಕಾಣದೇ ಇರಬಹುದು. ಹೀಗಾಗಿ ನಿಮ್ಮ ವಾಹನದ ಹೆಡ್‌ಲೈಟ್‌ಅನ್ನು ಟಾಪ್ ಕಂಡೀಷನ್‌ನಲ್ಲಿಡುವುದು ಸೂಕ್ತ . ನಿಮ್ಮ ಬಜೆಟ್‌ನಲ್ಲಿ ಸಾಧ್ಯವಾದರೆ ಮೊದಲು ಬೆಳಕಿನ ದೀಪಗಳ ತಂತ್ರಜ್ಞಾನದಲ್ಲಿ ಮಾರ್ಪಾಡುಗಳನ್ನು ಮಾಡಿಕೊಳ್ಳಿ.