
ಪುತ್ರಿಯ ಬಗ್ಗೆ ಮಾತನಾಡಿದ ಹರ್ನಾಜ್ ತಾಯಿ ವೈದ್ಯೆ ರವೀಂದರ್ ಕೌರ್, ಜೋಳದ ರೊಟ್ಟಿ ಹಾಗೂ ಪಾಲಕ್ ಸೊಪ್ಪಿನ ಸಾಗು ಅಂದರೆ ಹರ್ನಾಜ್ಗೆ ಪಂಚಪ್ರಾಣ. ಆಕೆ ಮನೆಗೆ ಬರುತ್ತಿದ್ದಂತೆಯೇ ನಾನು ಇದೇ ಖಾದ್ಯದ ಮೂಲಕ ಆಕೆಯನ್ನು ಸ್ವಾಗತಿಸುತ್ತೇನೆ ಎಂದು ಹೇಳಿದ್ರು.
ಸಂಧು ಸಹೋದರ ಹರ್ನೂರ್ ಕೂಡ ಸಹೋದರಿಯ ಸಾಧನೆ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಇದು ನಿಜಕ್ಕೂ ನಮಗೆ ಹೆಮ್ಮೆಯ ವಿಚಾರ. ನಮ್ಮ ಭಾವನೆಯನ್ನು ವ್ಯಕ್ತಪಡಿಸಲು ಪದಗಳೇ ಸಿಗುತ್ತಿಲ್ಲ. ಆಕೆ ಎಂದಿಗೂ ಶಾಂತಿಪ್ರಿಯೆ ಹಾಗೂ ತನ್ನ ಗುರಿಯ ಬಗ್ಗೆ ಸ್ಪಷ್ಟತೆಯನ್ನು ಹೊಂದಿದಂತವಳು. ಆಕೆ ಏನೆಂಬುದನ್ನು ನಾನು ಬಾಲ್ಯದಿಂದಲೂ ಬಲ್ಲೆ. ಆಕೆಯು ಈ ಪಟ್ಟವನ್ನು ಅಲಂಕರಿಸುತ್ತಾಳೆ ಎಂಬ ನಂಬಿಕೆಯಿತ್ತು ಎಂದು ಹೇಳಿದ್ರು.
ಆಕೆ ಎಂದಿಗೂ ನಾನೇನಾದರೂ ವಿಶೇಷವಾಗಿ ಸಾಧಿಸಬೇಕು ಎಂದು ಹೇಳುತ್ತಿದ್ದಳು. ಆಕೆ ಮಿಸ್ ಚಂಡೀಗಢ ಆಗಿದ್ದಾಳೆ, ಮಿಸ್ ಪಂಜಾಬ್ ಹೀಗೆ ಮುಂದುವರಿದು ಇದೀಗ ಆಕೆ ವಿಶ್ವ ಸುಂದರಿ ಪಟ್ಟವನ್ನು ಅಲಂಕರಿಸಿದ್ದಾಳೆ ಎಂದು ಹೇಳಿದ್ರು.