ರಾಮಾಯಣ ಎಕ್ಸ್ಪ್ರೆಸ್ನಲ್ಲಿ ವೇಟರ್ಗಳಿಗೆ ಕೇಸರಿ ಉಡುಗೆಯನ್ನು ನೀಡಿದ್ದಕ್ಕೆ ಮಧ್ಯ ಪ್ರದೇಶದ ಉಜ್ಜಯಿನಿಯ ಶ್ರೀಗಳು ಇದು ಹಿಂದೂ ಧರ್ಮಕ್ಕೆ ಮಾಡಿದ ಅವಮಾನ ಎಂದು ಕಿಡಿಕಾರಿದ್ದಾರೆ. ಅಲ್ಲದೇ ವೇಟರ್ಗಳಿಗೆ ನೀಡಲಾದ ಈ ಡ್ರೆಸ್ಕೋಡ್ ಹಿಂಪಡೆಯದೇ ಇದ್ದರೆ ಡಿಸೆಂಬರ್ 12ರಂದು ದೆಹಲಿಯಲ್ಲಿ ರೈಲು ನಿಲ್ಲಿಸುವುದಾಗಿ ಬೆದರಿಕೆ ಹಾಕಿದ್ದಾರೆ.
ರಾಮಾಯಣ ಎಕ್ಸ್ಪ್ರೆಸ್ನಲ್ಲಿ ಕೇಸರಿ ಬಣ್ಣದ ಬಟ್ಟೆ ಧರಿಸಿದ ವೇಟರ್ಗಳು ಆಹಾರಗಳನ್ನು ಪ್ರಯಾಣಿಕರಿಗೆ ಬಡಿಸುತ್ತಿರುವ ಬಗ್ಗೆ ಕೇಂದ್ರ ರೈಲ್ವೆ ಸಚಿವರಿಗೆ ಪತ್ರ ಬರೆದಿದ್ದೇವೆ. ವೇಟರ್ಗಳು ಸಾಧುಗಳಂತೆ ಕೇಸರಿ ಬಣ್ಣದ ಬಟ್ಟೆ, ಹಾರ ಹಾಗೂ ರುದ್ರಾಕ್ಷಿ ಮಾಲೆಗಳನ್ನು ಧರಿಸಿದ್ದಾರೆ. ಇದು ಹಿಂದೂ ಧರ್ಮ ಹಾಗೂ ಶ್ರೀಗಳಿಗೆ ಮಾಡಿದ ಅವಮಾನವಾಗಿದೆ ಎಂದು ಉಜ್ಜಯಿನಿ ಅಖಂಡ ಪರಿಷತ್ನ ಮಾಜಿ ಪ್ರಧಾನ ಕಾರ್ಯದರ್ಶಿ ಅವದೇಶಪುರಿ ಹೇಳಿದ್ರು.
ವೇಟರ್ಗಳ ಡ್ರೆಸ್ ಕೋಡ್ನ್ನು ಬದಲಾಯಿಸದೇ ಹೋದಲ್ಲಿ ತಾವು ದೆಹಲಿಯ ಸಫ್ದರ್ಗಂಜ್ ರೈಲು ನಿಲ್ದಾಣದಲ್ಲಿ ರೈಲು ನಿಲ್ಲಿಸೋದಾಗಿ ಹೇಳಿದ್ರು.
ನಾವು ರೈಲ್ವೆ ಹಳಿಗಳ ಮೇಲೆ ಕೂರುತ್ತೇವೆ. ಹಿಂದೂ ಧರ್ಮದ ಉಳಿವಿಗಾಗಿ ಈ ಹೋರಾಟ ಅನಿವಾರ್ಯವಾಗಿದೆ. ಈ ವಿಚಾರವನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ ಎಂದು ಹೇಳಿದ್ರು.