ದೇಶದ ಬ್ಯಾಡ್ಮಿಂಟನ್ ಲೋಕದ ದಂತಕಥೆ ಪುಲ್ಲೇಲ ಗೋಪಿಚಂದ್‌ರ ಆತ್ಮಚರಿತ್ರೆ, ’ಶಟರ್ಸ್ ಫ್ಲಿಕ್: ಮೇಕಿಂಗ್ ಎವೆರಿ ಮ್ಯಾಚ್ ಕೌಂಟ್’ ಕಳೆದ ವಾರ ಪುಸ್ತಕ ಮಳಿಗೆಗಳಿಗೆ ಲಗ್ಗೆ ಇಟ್ಟಿದೆ. ಈ ಪುಸ್ತಕವನ್ನು ಪ್ರಿಯಾ ಕುಮಾರ್ ಬರೆದಿದ್ದಾರೆ.
ಈ ಪುಸ್ತಕದಲ್ಲಿ ಗೋಪಿ ತಮ್ಮ ಜೀವನದಲ್ಲಿ ಅಳವಡಿಸಿಕೊಂಡ ಸಿದ್ಧಾಂತದ ಬಗ್ಗೆ ಮಾತನಾಡುತ್ತಿದ್ದು, “ಇತರರನ್ನು ಮೇಲೆತ್ತುವುದೇ ಸಂತಸ, ತೃಪ್ತಿ ಹಾಗೂ ಶಾಂತಿಗೆ ಇರುವ ನಿಜವಾದ ದಾರಿ,” ಎಂದು ಚಂದ್ರಗುಪ್ತರಿಗೆ ಚಾಣಕ್ಯ ತಿಳಿಸಿದ ಸಂಗತಿಯನ್ನು ಹೇಳಿರುವ ಗೋಪಿಚಂದ್, ತಮ್ಮ ಆತ್ಮಚರಿತ್ರೆ ಬರೀ ಕ್ರೀಡೆಯಷ್ಟೇ ಅಲ್ಲ, ಎಲ್ಲಾ ಕ್ಷೇತ್ರಗಳಿಗೆ ಸೇರಿದ ಜನರಿಗೂ ಸ್ಪೂರ್ತಿಯಾಗಲಿದೆ ಎಂದಿದ್ದಾರೆ.
ತನ್ನ ಮೊದಲ ಪ್ರೀತಿ ರಾಹುಲ್ ದ್ರಾವಿಡ್ ಎಂದ್ರು ಈ ಬಾಲಿವುಡ್ ನಟಿ……!
ಇದೇ ಪುಸ್ತಕದಲ್ಲಿ ತಮ್ಮ ದಾಂಪತ್ಯ ಜೀವನ, ಬಿಡುವಿನ ಅವಧಿಯಲ್ಲಿ ಮಾಡುವ ಕೆಲಸ, ತಮ್ಮ ಅಕಾಡೆಮಿಯಿಂದ ಸೈನಾ ನೆಹ್ವಾಲ್ ನಿರ್ಗಮಿಸಿದ್ದು, ಆಟಗಾರರಲ್ಲಿ ಶಿಸ್ತು ತರಲು ತಾವು ತೆಗೆದುಕೊಳ್ಳುವ ಕ್ರಮಗಳು, ಪಿವಿ ಸಿಂಧುರನ್ನು ಒಲಿಂಪಿಕ್ ಪದಕ ಗೆಲ್ಲಲು ಸಜ್ಜುಗೊಳಿಸಿದ ವಿಚಾರ ಸೇರಿ ಅನೇಕ ಆಸಕ್ತಿಕರ ಸಂಗತಿಗಳ ಕುರಿತು ಮಾತನಾಡಿದ್ದಾರೆ.
2010ರ ಏಷ್ಯನ್ ಗೇಮ್ಸ್ ಮುಗಿದ ಬಳಿಕ ಪಿ ವಿ ಸಿಂಧು ತಂದೆಯನ್ನು ಕರೆಯಿಸಿ, ಅವರ ಪುತ್ರಿಗೆ ವೈಯಕ್ತಿಕವಾಗಿ ಕೋಚಿಂಗ್ ನೀಡಲು ಆರಂಭಿಸುವುದಾಗಿ ಹೇಳಿದ್ದಾಗಿ ಗೋಪಿಚಂದ್ ಹೇಳಿಕೊಂಡಿದ್ದಾರೆ.
“ಬೆಳಿಗ್ಗೆ 4:30ಕ್ಕೆಲ್ಲಾ ತರಬೇತಿ ಆರಂಭಿಸಬೇಕಾದ ಕಾರಣ ಹಾಗೂ ಈ ಅವಧಿಯಲ್ಲಿ ಸಿಂಧುರನ್ನು ತರಬೇತುಗೊಳಿಸಲು ಪ್ರತಿನಿತ್ಯ ಯೋಗ ಮಾಡಲೆಂದು ಮೀಸಲಿಟ್ಟಿದ್ದ ಒಂದು ಗಂಟೆಯ ಅವಧಿಯನ್ನು ತಪ್ಪಿಸಿಕೊಂಡು ಆಕೆಗೆ ತರಬೇತಿ ಕೊಟ್ಟರು ಗೋಪಿಚಂದ್. ಡಿಸೆಂಬರ್ 2010ರಿಂದ ಹೀಗೆ ಮಾಡುತ್ತಾ ಬಂದ ಗೋಪಿ, ಆಕೆಯಲ್ಲಿ ವಿಶ್ವಚಾಂಪಿಯನ್ ಆಗಲು ಬೇಕಾದ ಅಗಾಧ ಸಾಮರ್ಥ್ಯ ಕಂಡಿದ್ದಾರೆ. ಒಂದೇ ವರ್ಷದ ಅವಧಿಯಲ್ಲಿ ಸಿಂಧು ಅವರ ನಂಬಿಕೆ ಉಳಿಸಿಕೊಂಡಿದ್ದಾರೆ,” ಎಂದು ಪುಸ್ತಕದಲ್ಲಿ ಬರೆಯಲಾಗಿದೆ.
ಬೆಕ್ಕಸಬೆರಗಾಗಿಸುತ್ತೆ ಈ ಕೋಟ್ಯಾಧೀಶ ಕೋಣದ ಸ್ಟೋರಿ
2006ರಿಂದ ಕೋಚಿಂಗ್ ವೃತ್ತಿಯಲ್ಲಿರುವ ಗೋಪಿಚಂದ್, ವಿಶ್ವದರ್ಜೆಯ ಆಟಗಾರರು ವಿಶ್ವ ದರ್ಜೆಯ ಕೋಚ್‌ಗಳಾಗಿರುವುದನ್ನು ಕಂಡ ದಿನ ಸಂತಸದಿಂದ ನಿವೃತ್ತರಾಗುವುದಾಗಿ ತಿಳಿಸಿದ್ದಾರೆ.
ಖುದ್ದು ಚಾಂಪಿಯನ್ನರಾಗುವ ಹಾದಿಯಲ್ಲಿ ಜಗತ್ತಿನ ಶ್ರೇಷ್ಠ ಆಟಗಾರರನ್ನು ಎದುರಿಸಿ ಅನುಭವ ಪಡೆದ ಕಾರಣ ಶ್ರೇಷ್ಠ ಆಟಗಾರರು ಶ್ರೇಷ್ಠ ಕೋಚ್‌ಗಳಾಗಬಲ್ಲರು ಎಂಬುದು ಗೋಪಿಚಂದ್‌ರ ಬಲವಾದ ನಂಬಿಕೆಯಾಗಿದೆ.