alex Certify ತನ್ನ ಮೊದಲ ಪ್ರೀತಿ ರಾಹುಲ್ ದ್ರಾವಿಡ್ ಎಂದ್ರು ಈ ಬಾಲಿವುಡ್ ನಟಿ……! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತನ್ನ ಮೊದಲ ಪ್ರೀತಿ ರಾಹುಲ್ ದ್ರಾವಿಡ್ ಎಂದ್ರು ಈ ಬಾಲಿವುಡ್ ನಟಿ……!

This Bollywood Actress Has Openly Declared Her Love For Rahul Dravid, Calls  Him Her First Mohabbat - Up Aero Spaceಭಾರತದ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರನ್ನು ಅವರ ಅಭಿಮಾನಿಗಳು ದಿ ವಾಲ್ ಎಂದು ಕರೆಯುತ್ತಾರೆ. ಅವರು ಭಾರತದ ಅತ್ಯಂತ ಪ್ರೀತಿಯ ಹಾಗೂ ಜನಪ್ರಿಯ ಆಟಗಾರರಲ್ಲಿ ಒಬ್ಬರಾಗಿದ್ದಾರೆ. 90ರ ದಶಕದಲ್ಲಿ ಹೆಂಗಳೆಯರ ಹಾಟ್ ಫೇವರಿಟ್ ಆಗಿದ್ದರು ದ್ರಾವಿಡ್. ಈಗಲೂ ಸಹ, ದ್ರಾವಿಡ್ ಅವರ ಶಾಂತ ವ್ಯಕ್ತಿತ್ವವು ಲಕ್ಷಾಂತರ ಮಹಿಳೆಯರನ್ನು ಆಕರ್ಷಿಸುತ್ತದೆ. ಅವರಲ್ಲಿ ಬಾಲಿವುಡ್ ನಟಿ ರಿಚಾ ಚಡ್ಡಾ ಕೂಡ ಒಬ್ಬರು.

ರಾಹುಲ್ ದ್ರಾವಿಡ್ ತನ್ನ ಮೊದಲ ಪ್ರೀತಿ ಎಂದು ಚಡ್ಡಾ ಬಹಿರಂಗಪಡಿಸಿದ್ದಾರೆ. ತನ್ನ ಮುಂಬರುವ ಚಿತ್ರ, ಶೋ ಇನ್ಸೈಡ್ ಎಡ್ಜ್ ಅನ್ನು ಪ್ರಚಾರ ಮಾಡುವಾಗ ನಟಿ ಈ ಹೇಳಿಕೆ ನೀಡಿದ್ದಾರೆ. ತಾನು ಎಂದಿಗೂ ಕ್ರಿಕೆಟ್‌ನ ದೊಡ್ಡ ಅಭಿಮಾನಿಯಾಗಿರಲಿಲ್ಲ. ಆದರೆ, ಟಿವಿಯಲ್ಲಿ ಕ್ರಿಕೆಟ್ ಪಂದ್ಯವನ್ನು ಪ್ರಸಾರ ಮಾಡಿದಾಗಲೆಲ್ಲಾ ತಾನು ದೂರದರ್ಶನ ಸೆಟ್‌ಗೆ ಅಂಟಿಕೊಂಡಿರಲು ರಾಹುಲ್ ದ್ರಾವಿಡ್ ಕಾರಣ ಎಂದು ಹೇಳಿದ್ದಾರೆ.

ಚಿಕ್ಕವಳಿರಬೇಕಾದರೆ ಕ್ರಿಕೆಟ್ ಪಂದ್ಯವನ್ನು ಮನೆಯಯವರೆಲ್ಲಾ ಕುಳಿತು ವೀಕ್ಷಿಸುವಾಗ ರಾಹುಲ್ ದ್ರಾವಿಡ್ ಆಟವನ್ನು ನೋಡಿ ಇಷ್ಟಪಟ್ಟಿರುವುದಾಗಿ ಅವರು ಹೇಳಿದ್ದಾರೆ. ಅವರು ತಮ್ಮ ನಿವೃತ್ತಿಯತ್ತ ಸಾಗಲು ಪ್ರಾರಂಭಿಸಿದಾಗ, ತಾನು ಕ್ರಿಕೆಟ್ ಪಂದ್ಯ ವೀಕ್ಷಿಸುವುದನ್ನು ನಿಲ್ಲಿಸಿದ್ದಾಗಿ ಚಡ್ಡಾ ಹೇಳಿದ್ದಾರೆ.

ಐಸಿಸಿ ಟಿ-20 ವಿಶ್ವಕಪ್ 2021ರ ಮುಕ್ತಾಯದೊಂದಿಗೆ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಅವರ ಅಧಿಕಾರಾವಧಿಯು ಅಂತ್ಯಗೊಂಡ ನಂತರ ದ್ರಾವಿಡ್, ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಈಗ ಮತ್ತೆ ಕ್ರಿಕೆಟ್ ಗೆ ದ್ರಾವಿಡ್ ಹಿಂತಿರುಗಿರುವುದರಿಂದ, ಮತ್ತೊಮ್ಮೆ ಆಟ ನೋಡಲು ಪ್ರಾರಂಭಿಸಿದ್ದಾಗಿ ನಟಿ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...