ಜಮ್ಮು & ಕಾಶ್ಮೀರದ ಕೈನಿಂದ ಕಸಿದುಕೊಳ್ಳಲಾದ ವಿಶೇಷ ಸ್ಥಾನಮಾನವನ್ನ ವಾಪಸ್ ನೀಡದ ಹೊರತು ತಾವು ಚುನಾವಣೆಯಲ್ಲಿ ಸ್ಪರ್ಧಿಸೋದಿಲ್ಲ ಎಂದು ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಹೇಳಿದ್ದಾರೆ. ರಾಜ್ಯದ ಜನರೊಂದಿಗೆ ಉಂಟಾಗಿರುವ ಈ ದಿಲ್ ಕಿ ದೂರಿಯನ್ನ ಹೇಗೆ ಸರಿ ಮಾಡಿಕೊಳ್ಳೋದು ಅನ್ನೋದರ ಬಗ್ಗೆ ಕೇಂದ್ರ ಸರ್ಕಾರ ಫೋಕಸ್ ಮಾಡಬೇಕು ಎಂದೂ ಅವರು ಹೇಳಿದ್ದಾರೆ.
3 ವರ್ಷ ವಯಸ್ಸಿನಲ್ಲೇ 50ಕ್ಕೂ ಹೆಚ್ಚು ಹಾಡನ್ನ ಹೇಳ್ತಾಳೆ ಈ ಪೋರಿ..!
ನಾನು ಕೇಂದ್ರಾಡಳಿತ ಪ್ರದೇಶದಲ್ಲಿ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸೋದಿಲ್ಲ ಎಂದು ಈಗಾಗಲೇ ಅನೇಕ ಬಾರಿ ಹೇಳಿದ್ದೇನೆ. ಹಾಗೆಂದು ನಮ್ಮ ಪಕ್ಷವು ತನಗಿರುವ ಸ್ಥಾನವನ್ನ ಯಾವುದೇ ಕಾರಣಕ್ಕೂ ಬೇರೆಯವರಿಗೆ ಬಿಟ್ಟುಕೊಡೋದಿಲ್ಲ ಎಂಬ ಅಂಶವೂ ಅಷ್ಟೇ ಸತ್ಯ. ಇದೇ ಕಾರಣಕ್ಕಾಗಿಯೇ ನಮ್ಮ ಪಕ್ಷ ಕಳೆದ ವರ್ಷ ನಡೆದ ಜಿಲ್ಲಾ ಅಭಿವೃದ್ಧಿ ಮಂಡಳಿ ಸ್ಪರ್ಧೆಯಲ್ಲಿ ಭಾಗವಹಿಸಿತ್ತು. ಅದೇ ರೀತಿ ವಿಧಾನಸಭಾ ಚುನಾವಣೆಯ ಬಗ್ಗೆ ಘೋಷಣೆ ಆದರೂ ಸಹ ನಮ್ಮ ಪಕ್ಷ ಕೂತು ಚರ್ಚೆ ಮಾಡಿ ನಿರ್ಧಾರಕ್ಕೆ ಬರಲಿದೆ ಎಂದು ಹೇಳಿದ್ದಾರೆ.
BIG NEWS: ರಾಜ್ಯ ಕಾಂಗ್ರೆಸ್ ಗೆ ಮೇಜರ್ ಸರ್ಜರಿ
ಯಾರಿಗೇ ಆದರೂ ಅಧಿಕಾರಿಗಳ ವಿರುದ್ಧ ಅಸಮಾಧಾನ ಇದ್ದರೆ ಅವರನ್ನ ಬಂಧಿಸಲಾಗುತ್ತೆ. ನಿಮ್ಮ ನಿಜವಾದ ಭಾವನೆ ಹೇಳಿಕೊಂಡರೆ ಟ್ವಿಟರ್ ನಿಮ್ಮನ್ನ ಜೈಲಿಗೆ ತಲುಪಿಸುತ್ತೆ. ಪ್ರಜಾಪ್ರಭುತ್ವ ಅಂದರೆ ಇದೇನಾ..? ಎಂದು ಮುಫ್ತಿ ಪ್ರಶ್ನೆ ಮಾಡಿದ್ದಾರೆ.
2019ರ ಆಗಸ್ಟ್ 5ನೇ ತಾರೀಖಿನಂದು ಜಮ್ಮು & ಕಾಶ್ಮೀರಕ್ಕೆ ನೀಡಲಾದ ವಿಶೇಷ ಸ್ಥಾನಮಾನ ವಾಪಸ್ ಪಡೆದಿದ್ದ ಕೇಂದ್ರ ಸರ್ಕಾರ ಜಮ್ಮು, ಕಾಶ್ಮೀರ ಹಾಗೂ ಲಡಾಖ್ ಕೇಂದ್ರಾಡಳಿತ ಪ್ರದೇಶವನ್ನ ಸ್ಥಾಪನೆ ಮಾಡಿತ್ತು.