alex Certify ಸೇನೆ ಸೇರಿ ಹುತಾತ್ಮ ಪತಿಯ ಆಸೆ ಈಡೇರಿಸಿದ ಮಡದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೇನೆ ಸೇರಿ ಹುತಾತ್ಮ ಪತಿಯ ಆಸೆ ಈಡೇರಿಸಿದ ಮಡದಿ

ಮೂರು ವರ್ಷಗಳ ಹಿಂದೆ ಕಾಶ್ಮೀರದ ಕುಲ್ಗಾಂವ್‌ನಲ್ಲಿ ಭಾರತೀಯ ಸೇನೆಯ ಪರವಾಗಿ ಭಯೋತ್ಪಾದಕರೊಂದಿಗೆ ಹೋರಾಡುತ್ತಾ ಗಾಯಗೊಂಡಿದ್ದ ಯೋಧ ನಾಯಕ್ ದೀಪಕ್ 40 ದಿನಗಳ ಜೀವನ್ಮರಣದ ಹೋರಾಟದ ಬಳಿಕ ಹುತಾತ್ಮರಾಗಿದ್ದರು.

ಮೂರು ವರ್ಷಗಳ ಬಳಿಕ ಅವರ ಪತ್ನಿ ಜ್ಯೋತಿ ನೈನ್ವಾಲ್ ಭಾರತೀಯ ಸೇನೆ ಸೇರಿದ್ದಾರೆ. 32 ವರ್ಷ ವಯಸ್ಸಿನ ಜ್ಯೋತಿ ತಮ್ಮ ಮಕ್ಕಳು ಹಾಗೂ ಕುಟುಂಬವನ್ನು ಸಂಭಾಳಿಸಿಕೊಂಡೇ ಪ್ರವೇಶ ಪರೀಕ್ಷೆಯಲ್ಲಿ ಪಾಸಾಗಿ ಚೆನ್ನೈನಲ್ಲಿರುವ ಅಧಿಕಾರಿಗಳ ತರಬೇತಿ ಕೇಂದ್ರಕ್ಕೆ (ಓಟಿಎ) ತರಬೇತಿಗಾಗಿ ಸೇರಿದ್ದರು. ಶನಿವಾರದಂದು ಜ್ಯೋತಿ ಭಾರತೀಯ ಸೇನೆಗೆ ಲೆಫ್ಟಿನೆಂಟ್ ಆಗಿ ಸೇರ್ಪಡೆಯಾಗಿದ್ದು, ಪಾಸ್‌ಔಟ್ ಪರೇಡ್‌ನಲ್ಲಿ ಭಾಗಿಯಾಗಿದ್ದರು.

ಜ್ಯೋತಿ ಅವರ ಪಾಸ್‌ಔಟ್ ಹಾಗೂ ಕಮಿಷನಿಂಗ್‌ನ ವಿಡಿಯೋವನ್ನು ರೆಕಾರ್ಡ್ ಮಾಡಲಾಗಿದ್ದು, ಪ್ರೆಸ್ ಇನ್ಫಾರ್ಮೇಷನ್ ಬ್ಯೋರೋ (ಪಿಐಬಿ) ಟ್ವಿಟರ್‌ನಲ್ಲಿ ಶೇರ್‌ ಮಾಡಿಕೊಂಡಿದೆ.

ʼಚಳಿಗಾಲʼದಲ್ಲಿ ಆರೋಗ್ಯ ವೃದ್ಧಿಗೆ ಸೇವಿಸಿ ನೆಲ್ಲಿಕಾಯಿ ಜ್ಯೂಸ್

“ಅವರು ನಮಗೆ ಹೆಮ್ಮೆಯ ಜೀವನವನ್ನು ಕೊಟ್ಟಿದ್ದಾರೆ….. ಇದನ್ನು ನಾನು ಮುಂದುವರೆಸಿಕೊಂಡು ಹೋಗಲು ಇಚ್ಛಿಸುತ್ತೇನೆ. ನನ್ನ ಪತಿಯ ರೆಜಿಮೆಂಟ್‌ಗೆ ಧನ್ಯವಾದ ತಿಳಿಸಲು ಬಯಸುತ್ತೇನೆ. ಪ್ರತಿ ಹೆಜ್ಜೆಯಲ್ಲೂ ಅವರು ನನ್ನೊಂದಿಗಿದ್ದು, ಮಗಳಂತೆ ನೋಡಿಕೊಂಡಿದ್ದಾರೆ. ದಿಟ್ಟ ಮಹಿಳೆಯರಿಗೆ, ನಾನು ಜನ್ಮಕ್ಕಾಗಿ ಇರುವ ತಾಯಿಯಾಗುವ ಬದಲು ಕರ್ಮಕ್ಕಾಗಿ ಇರುವ ತಾಯಿಯಾಗಲು ಬಯಸುತ್ತೇನೆ ಮತ್ತು ನಾನು ಯಾವುದಕ್ಕೆ ಬದುಕುತ್ತೇನೋ, ಅದು ನನ್ನ ಮಕ್ಕಳಿಗೆ ಉಡುಗೊರೆಯಾಗಿರಲಿದೆ,” ಎಂದು ಜ್ಯೋತಿ ಹೇಳಿದ್ದಾರೆ.

ಭಯೋತ್ಪಾದಕರೊಂದಿಗೆ ಹೋರಾಡುವ ಸಂದರ್ಭ ಬೆನ್ನುಮೂಳೆ ಹಾಗೂ ಎದೆಗೆ ಗುಂಡೇಟು ಬಿದ್ದಿದ್ದ, ಕೆಳಭಾಗದ ದೇಹದ ಸ್ವಾಧೀನ ಕಳೆದುಕೊಂಡಿದ್ದ ದೀಪಕ್‌‌ ಆಸ್ಪತ್ರೆಯಲ್ಲಿ ಜೀವಕ್ಕಾಗಿ ಹೋರಾಡುವ ನಡುವೆಯೇ ತನ್ನ ಪತ್ನಿ ಸಹ ಸೇನೆಗೆ ಸೇರುವುದು ತನಗೆ ಇಷ್ಟವಾಗುತ್ತದೆಂದು ಆಕೆಗೆ ತಿಳಿಸಿದ್ದರು.

— PIB in Tamil Nadu ?? (@pibchennai) November 20, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...