alex Certify ಪತಿ ಜೊತೆ ಬೆಡ್ರೂಮ್ ನಲ್ಲಿದ್ದ ಮಹಿಳೆಗೆ ಪತ್ನಿಯಿಂದ ಗೂಸಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪತಿ ಜೊತೆ ಬೆಡ್ರೂಮ್ ನಲ್ಲಿದ್ದ ಮಹಿಳೆಗೆ ಪತ್ನಿಯಿಂದ ಗೂಸಾ

 ಕೊಪ್ಪಳ: ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್ ಪರಸ್ತ್ರೀ ಜೊತೆಗಿದ್ದಾಗಲೇ ಪತ್ನಿ ಹಾಗೂ ಮಕ್ಕಳ ಕೈಗೆ ಸಿಕ್ಕಿಬಿದ್ದು ಪರಾರಿಯಾದ ಘಟನೆ ಕೊಪ್ಪಳದ ಕುಷ್ಟಗಿ ಸರ್ಕಲ್ ಬಳಿ ನಡೆದಿದೆ. ಈ ವೇಳೆ ಇಂಜಿನಿಯರ್ ಪತ್ನಿ ಮತ್ತು ಆತನ ಮಕ್ಕಳು ಮಹಿಳೆಯನ್ನು ಥಳಿಸಿದ್ದಾರೆ.

ಮದುವೆಯಾಗಿ ಪತ್ನಿ ಮಕ್ಕಳಿದ್ದರೂ ಅಕ್ರಮ ಸಂಬಂಧ ಬೆಳೆಸಿದ್ದ ಇಂಜಿನಿಯರ್ ಮಹಿಳೆಯ ಮನೆಯಲ್ಲಿ ತಂಗಿದ್ದ. ಈ ವಿಷಯ ತಿಳಿದ ಪತ್ನಿ ಮತ್ತು ಮಕ್ಕಳು ಮನೆ ಮೇಲೆ ದಾಳಿ ಮಾಡಿದ್ದಾರೆ. ಬೆಡ್ರೂಮ್ನಲ್ಲಿ ಇಂಜಿನಿಯರ್ ಮಹಿಳೆಯೊಂದಿಗೆ ಇರುವುದನ್ನು ಗಮನಿಸಿದ ಪತ್ನಿ ಮತ್ತು ಮಕ್ಕಳು ಕೂಗಾಡಿದ್ದು, ಈ ವೇಳೆ ಇಂಜಿನಿಯರ್ ಪರಾರಿಯಾಗಿದ್ದು, ಮಹಿಳೆ ಮೇಲೆ ಆಕ್ರೋಶಗೊಂಡ ಪತ್ನಿ ಹಾಗೂ ಮಕ್ಕಳು ಹಲ್ಲೆ ಮಾಡಿದ್ದಾರೆ. ಮಹಿಳೆ ಕೂಡ ತನ್ನ ಮನೆಗೆ ಬಂದಿದ್ದು ಏಕೆ ಎಂದು ಪ್ರಶ್ನಿಸಿ ಗಲಾಟೆ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...