alex Certify ಮಗುವಿಗೆ ಹಾಲುಣಿಸುವಾಗಲೇ ಪತಿಯಿಂದ ಘೋರ ಕೃತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಗುವಿಗೆ ಹಾಲುಣಿಸುವಾಗಲೇ ಪತಿಯಿಂದ ಘೋರ ಕೃತ್ಯ

ಹುಬ್ಬಳ್ಳಿ: ಪತ್ನಿ ಮಗುವಿಗೆ ಹಾಲುಣಿಸುವಾಗಲೇ ದಾಳಿ ಮಾಡಿದ ಪತಿರಾಯ ಬ್ಲೇಡ್ ನಿಂದ ಇರಿದು ಗಾಯಗೊಳಿಸಿದ ಘಟನೆ ಹುಬ್ಬಳ್ಳಿಯ ಸೆಟ್ಲಮೆಂಟ್ ಗಂಗಾಧರ ನಗರದಲ್ಲಿ ನಡೆದಿದೆ.

ಸಂಗೀತಾ ಹಲ್ಲೆಗೊಳಗಾದ ಮಹಿಳೆ. ಆಕೆಯ ಪತಿ ಸುನಿಲ ಬ್ಲೇಡಿನಿಂದ ಇರಿದು ಪರಾರಿಯಾಗಿದ್ದಾನೆ. ದಂಪತಿಯ ನಡುವೆ ಮೊದಲಿನಿಂದಲೂ ವಿರಸವಿದ್ದು, ಎರಡು ವರ್ಷಗಳಿಂದ ಬೇರೆಯಾಗಿದ್ದರು. ಸಂಗೀತ ಬೇರೆಯವರೊಂದಿಗೆ ಜೀವನ ಸಾಗಿಸುತ್ತಿದ್ದು 2 ತಿಂಗಳ ಹಿಂದೆ ಮಗು ಜನಿಸಿತ್ತು.

ಇದರಿಂದ ಆಕ್ರೋಶಗೊಂಡ ಸುನಿಲ ಶುಕ್ರವಾರ ಏಕಾಏಕಿ ಮನೆಗೆ ನುಗ್ಗಿ ಮಗುವಿಗೆ ಹಾಲುಣಿಸುತ್ತಿದ್ದ ಪತ್ನಿ ಮೇಲೆ ಬ್ಲೇಡಿನಿಂದ ಇರಿದು ಪರಾರಿಯಾಗಿದ್ದಾನೆ. ಗಾಯಗೊಂಡಿರುವ ಸಂಗೀತಾರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಂಡಿಗೇರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...