alex Certify ನಗು ತರಿಸುತ್ತಿದೆ RCB ಅಭಿಮಾನಿಯ ಈ ಫೋಟೋ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಗು ತರಿಸುತ್ತಿದೆ RCB ಅಭಿಮಾನಿಯ ಈ ಫೋಟೋ..!

ಯುಎಇನಲ್ಲಿ ನಡೆಯುತ್ತಿರುವ ಐಪಿಎಲ್​ ದ್ವಿತೀಯಾರ್ಧದಲ್ಲಿ ನಡೆದ ಪಂದ್ಯಗಳಲ್ಲಿ ಯಾಕೋ ಆರ್​ಸಿಬಿ ಅದೃಷ್ಟ ಚೆನ್ನಾಗಿಲ್ಲ ಅನ್ನೋವಾಗಲೇ ಕೊಹ್ಲಿ ಪಡೆ ನಿನ್ನೆ ಮುಂಬೈ ಇಂಡಿಯನ್ಸ್​ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಗೆಲವು ದಾಖಲಿಸಿದೆ. ಆದರೆ ಶುಕ್ರವಾರ ಶಾರ್ಜಾ ಅಂಗಳದಲ್ಲಿ ಸಿಎಸ್​ಕೆ ವಿರುದ್ಧ ಆರ್​ಸಿಬಿ ಮಂಡಿಯೂರಿತ್ತು.

ಪಂದ್ಯದಲ್ಲಿ ಮೊದಲು ಬ್ಯಾಟ್​ ಮಾಡಿದ್ದ ಆರ್​ಸಿಬಿ ಧೋನಿ ಪಡೆಗೆ ದೊಡ್ಡ ಗುರಿಯನ್ನು ನೀಡುವಲ್ಲಿ ವಿಫಲವಾಗಿತ್ತು. ಹೀಗಾಗಿ ಸಿಎಸ್​ಕೆ ಕೊಹ್ಲಿ ಪಡೆ ಮುಂದೆ ಭರ್ಜರಿ ಗೆಲವು ದಾಖಲಿಸಿತ್ತು. ಈ ಪಂದ್ಯ ಮುಗಿದು ಈಗಾಗಲೇ ಎರಡ್ಮೂರು ದಿನ ಕಳೆದರೂ ಸಹ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿರುವ ಒಂದೇ ಒಂದು ಫೋಟೋದ ಕಾರಣದಿಂದಾಗಿ ಈ ಹಣಾಹಣಿಯು ಮತ್ತೊಮ್ಮೆ ಸುದ್ದಿಯಲ್ಲಿದೆ.

ಆರ್​ಸಿಬಿ ಅಭಿಮಾನಿಯೊಬ್ಬ ಕೈಯಲ್ಲಿ ಒಂದು ಬ್ಯಾನರ್​ ಹಿಡಿದುಕೊಂಡಿದ್ದರು. ಇದರಲ್ಲಿ ‘ನನ್ನ ಪತ್ನಿ ನನಗೆ ಸಿಎಸ್​ಕೆ ಜೆರ್ಸಿ ತೊಡಲು ಬಿಡುವುದಿಲ್ಲ’ ಎಂದು ಬರೆಯಲಾಗಿದೆ. ಈ ಫೋಟೋವನ್ನು ಸಿಎಸ್​ಕೆ ತನ್ನ ಟ್ವಿಟರ್​ ಖಾತೆಯಲ್ಲಿ ಶೇರ್​ ಮಾಡಿದೆ.

ಈ ಫೋಟೋ ನೋಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್​ ತಂಡದ ಅಭಿಮಾನಿಗಳು ತಮ್ಮದೇ ಆದ ರೀತಿಯಲ್ಲಿ ಕಮೆಂಟ್​ ಮಾಡ್ತಿದ್ದಾರೆ.

— Chennai Super Kings (@ChennaiIPL) September 25, 2021

 

 

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...