
ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಆರ್ಸಿಬಿ ಧೋನಿ ಪಡೆಗೆ ದೊಡ್ಡ ಗುರಿಯನ್ನು ನೀಡುವಲ್ಲಿ ವಿಫಲವಾಗಿತ್ತು. ಹೀಗಾಗಿ ಸಿಎಸ್ಕೆ ಕೊಹ್ಲಿ ಪಡೆ ಮುಂದೆ ಭರ್ಜರಿ ಗೆಲವು ದಾಖಲಿಸಿತ್ತು. ಈ ಪಂದ್ಯ ಮುಗಿದು ಈಗಾಗಲೇ ಎರಡ್ಮೂರು ದಿನ ಕಳೆದರೂ ಸಹ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಒಂದೇ ಒಂದು ಫೋಟೋದ ಕಾರಣದಿಂದಾಗಿ ಈ ಹಣಾಹಣಿಯು ಮತ್ತೊಮ್ಮೆ ಸುದ್ದಿಯಲ್ಲಿದೆ.
ಆರ್ಸಿಬಿ ಅಭಿಮಾನಿಯೊಬ್ಬ ಕೈಯಲ್ಲಿ ಒಂದು ಬ್ಯಾನರ್ ಹಿಡಿದುಕೊಂಡಿದ್ದರು. ಇದರಲ್ಲಿ ‘ನನ್ನ ಪತ್ನಿ ನನಗೆ ಸಿಎಸ್ಕೆ ಜೆರ್ಸಿ ತೊಡಲು ಬಿಡುವುದಿಲ್ಲ’ ಎಂದು ಬರೆಯಲಾಗಿದೆ. ಈ ಫೋಟೋವನ್ನು ಸಿಎಸ್ಕೆ ತನ್ನ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದೆ.
ಈ ಫೋಟೋ ನೋಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಭಿಮಾನಿಗಳು ತಮ್ಮದೇ ಆದ ರೀತಿಯಲ್ಲಿ ಕಮೆಂಟ್ ಮಾಡ್ತಿದ್ದಾರೆ.
https://twitter.com/MSDhoniRules/status/1441703612682424322