ವಿಕೆಟ್ ಕೀಪರ್ ಕೈಯಲ್ಲಿ ಕ್ಯಾಚ್ ಹಿಡಿದು ವಿಕೆಟ್ ಪಡೆಯೋದನ್ನ ಕ್ರಿಕೆಟ್ ನಲ್ಲಿ ನೀವು ಸಾಕಷ್ಟು ಸಾರಿ ನೋಡಿಯೇ ಇರ್ತೀರಿ. ಆದರೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ ಇದುವರೆಗೂ ಯಾವುದೇ ವಿಕೆಟ್ ಕೀಪರ್ ಕ್ಯಾಚ್ ಹಿಡಿಯಲು ಸಾಧ್ಯವಾಗದ ರೀತಿಯಲ್ಲಿ ಕ್ಯಾಚ್ ಹಿಡಿದಿದ್ದಾರೆ.
ಕೆಪಿಎ 123 ಹಾಗೂ ಕೆಸಿಎಸ್ಎ ಕ್ಯಾಲಿಕಟ್ ನಡುವೆ ಕೇರಳ ಪ್ರೀಮಿಯರ್ ಲೀಗ್ ಪಂದ್ಯ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ವಿಕೆಟ್ ಕೀಪರ್ ಈ ಅಸಾಧಾರಣ ಕ್ಯಾಚ್ ಹಿಡಿದಿದ್ದಾರೆ.
ಕೆಪಿಎ 123 ತಂಡದ ವಿಕೆಟ್ ಕೀಪರ್ ಕ್ಯಾಚ್ ಹಿಡಿಯಲು ತನ್ನ ಬಲಕ್ಕೆ ಡೈವ್ ಮಾಡಿದ್ದರು. ಟ್ವಿಸ್ಟ್ ಏನೆಂದರೆ ಬಾಲ್ ಅವರ ಕೈಗೆ ಸಿಕ್ಕಿರಲಿಲ್ಲ. ಇನ್ನೇನು ವಿಕೆಟ್ ಪಡೆಯೋದು ಮಿಸ್ ಆಯ್ತು ಅಂದುಕೊಳ್ಳುವಷ್ಟರಲ್ಲಿ ಡೈವ್ ಹೊಡೆದಿದ್ದ ವಿಕೆಟ್ ಕೀಪರ್ ಬೆನ್ನಿನ ಮೇಲೆ ಚೆಂಡು ಬಿದ್ದಿದ್ದು ವಿಕೆಟ್ ಕೀಪರ್ ಬಾಲ್ನ್ನು ಹಿಡಿದುಕೊಂಡಿದ್ದಾರೆ.
ವಿಕೆಟ್ ಕೀಪರ್ ಈ ರೀತಿಯ ರೋಮಾಂಚನಾಕಾರಿ ಕ್ಯಾಚ್ ಹಿಡಿದ ಬಳಿಕ ಅವರ ತಂಡದವರು ಅಭಿನಂದಿಸಲು ಖುಷಿಯಿಂದ ಮುಗಿಬಿದ್ದಿದ್ದಾರೆ. ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
https://youtu.be/0SIxax5TbuM