ನಿಮ್ಮ ಬಳಿ ನಿಮ್ಮ ಕಾರಿನ ಎರಡೂ ಕೀಲಿಗಳು ಇಲ್ಲದೇ ಇದ್ದರೆ ವಿಮಾ ಸೇವಾದಾರರು ಕಾರಿನ ಮೇಲೆ ಮಾಡುವ ಕ್ಲೇಂ ಅನ್ನು ತಿರಸ್ಕರಿಸುತ್ತಾರೆ ಎಂಬ ವಿಷಯ ನಿಮಗೆ ತಿಳಿದರೆ ಅಚ್ಚರಿಯಾಗಬಹುದು.
ಕಾರು ವಿಮೆ ಸಂಬಂಧ ಸಾಮಾನ್ಯವಾಗಿ ನಿರ್ಲಕ್ಷಿತವಾದ ಕ್ರಿಟಿಕಲ್ ಪ್ರಶ್ನೆಯೊಂದಕ್ಕೆ ಇಲ್ಲಿದೆ ನೋಡಿ ವಿವರಣೆ:
ನಿಮ್ಮ ಕಾರು ಕಳ್ಳತನವಾಗಿ ವಿಮೆ ಕ್ಲೇಂ ಮಾಡಿದ ಸಂದರ್ಭ ನಿಮ್ಮ ವಿಮಾ ಸೇವಾದಾರರು ಕಾರಿನ ಎರಡೂ ಕೀಲಿಗಳನ್ನು ಪ್ರಸ್ತುತಪಡಿಸಲು ಕೇಳಬಹುದು. ನೀವು ಹೊಸ ವಾಹನ ಖರೀದಿ ಮಾಡಿದ ವೇಳೆ ಅದರ ಉತ್ಪಾದಕರು ನಿಮಗೆ ಎರಡು ಕೀಲಿಗಳನ್ನು ಕೊಟ್ಟಿರುತ್ತಾರೆ.
ದೀಪಿಕಾ ಪರ್ಸ್ ನಲ್ಲಿರುತ್ತೆ ಸೂಜಿ-ದಾರ….! ಕಾರಣ ಪತಿ ರಣವೀರ್ ಸಿಂಗ್
ವಿಮೆ ಕ್ಲೇಂಗೆ ಅರ್ಜಿ ಸಲ್ಲಿಸಿದ ವೇಳೆ ಎರಡೂ ಕೀಲಿಗಳನ್ನು ಕೊಡುವುದು ಕಡ್ಡಾಯವೆಂಬ ನಿಯಮ ಇಲ್ಲದೇ ಇದ್ದರೂ ಸಹ ವಿಮಾ ಸೇವಾದಾರರು ವಿಮಾ ಕ್ಲೇಂ ಪರಿಷ್ಕರಣೆಗೂ ಮುನ್ನ ಎರಡೂ ಕೀಲಿಗಳನ್ನು ಮುಂದಿಡಲು ಕೋರುತ್ತಾರೆ. ಇಲ್ಲವಾದಲ್ಲಿ ಕ್ಲೇಂ ತಿರಸ್ಕೃತಗೊಳ್ಳುವ ಸಾಧ್ಯತೆ ಇರುತ್ತದೆ.
ಕಾರು ವಿಮಾ ಪಾಲಿಸಿಗಳು ಕಳ್ಳತನದ ಸಾಧ್ಯತೆಯನ್ನು ಪರಿಗಣಿಸಿದರೂ ಸಹ ನಿರ್ಲಕ್ಷ್ಯದಿಂದಾಗುವ ಕಳ್ಳತನಗಳನ್ನು ಒಳಗೊಳ್ಳುವುದಿಲ್ಲ. ಹೀಗಾಗಿ, ಮಾಲೀಕರ ನಿರ್ಲಕ್ಷ್ಯದಿಂದ ಕಾರು ಕಳ್ಳತನವಾಗಿಲ್ಲ ಎಂದು ಖಾತ್ರಿಪಡಿಸಿಕೊಳ್ಳಲು ವಿಮಾ ಸೇವಾದಾರರು ಮಾಲೀಕರಿಂದ ಎರಡೂ ಕೀಲಿಗಳನ್ನು ಕೇಳುತ್ತಾರೆ.
ಒಂದು ವೇಳೆ ಕೀಲಿಗಳು ಕಾರಿನಲ್ಲೇ ಇದ್ದು ಕಳ್ಳರು ಕದ್ದರೆ, ಅದು ಮಾಲೀಕರ ನಿರ್ಲಕ್ಷ್ಯವೆಂದು ಪರಿಗಣಿಸಲ್ಪಡುತ್ತದೆ. ತಮ್ಮ ವಾಹನದ ಸುರಕ್ಷತೆ ಖಾತ್ರಿ ಪಡಿಸಲು ಮಾಲೀಕರು ಸೂಕ್ತ ವ್ಯವಸ್ಥೆ ಮಾಡಿಕೊಳ್ಳಬೇಕಾಗುತ್ತದೆ.