alex Certify ದೀಪಿಕಾ ಪರ್ಸ್ ನಲ್ಲಿರುತ್ತೆ ಸೂಜಿ-ದಾರ….! ಕಾರಣ ಪತಿ ರಣವೀರ್ ಸಿಂಗ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೀಪಿಕಾ ಪರ್ಸ್ ನಲ್ಲಿರುತ್ತೆ ಸೂಜಿ-ದಾರ….! ಕಾರಣ ಪತಿ ರಣವೀರ್ ಸಿಂಗ್

Deepika Padukone Carries Sewing Kit And Safety Pins For Husband Ranveer  Singh | पर्स में सुई धागा और सेफ्टी पिन लेकर चलती हैं Deepika Padukone, वजह  हैं उनके पति Ranveer Singh - KARKEY

ಬಾಲಿವುಡ್ ನ ಪ್ರಸಿದ್ಧ ಜೋಡಿಗಳಲ್ಲಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅತ್ಯಂತ ವಿಶೇಷ ಜೋಡಿ. ಈ ಇಬ್ಬರ ಫೋಟೋಗಳು ಹೆಚ್ಚಾಗಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತವೆ. ರಣವೀರ್ ಕೂಲ್ ವ್ಯಕ್ತಿ. ರಣವೀರ್ ಗೆ ಹೊಂದಿಕೊಂಡಿರುವ ದೀಪಿಕಾ ಯಾವಾಗಲೂ ತಮ್ಮ ಬ್ಯಾಗಿನಲ್ಲಿ ಸೂಜಿ ಮತ್ತು ದಾರವನ್ನು ಒಯ್ಯುತ್ತಾರಂತೆ.

ಹೌದು, ದಿ ಕಪಿಲ್ ಶರ್ಮಾ ಶೋದಲ್ಲಿ ದೀಪಿಕಾ ಇದನ್ನು ಹೇಳಿದ್ದಾರೆ. ಕೆಲ ವದಂತಿಗಳಿಗೆ ತಮ್ಮದೆ ಶೈಲಿಯಲ್ಲಿ ಉತ್ತರಿಸಿದ ದೀಪಿಕಾ, ಕಪಿಲ್ ಶರ್ಮಾ ಕೇಳಿದ ಕಿಟ್ ವಿಷ್ಯವನ್ನೂ ಹೇಳಿದ್ರು. ಕಿಟ್ ನಲ್ಲಿ ಸೂಚಿ-ದಾರ ಇರುತ್ತೆ ಎಂಬುದನ್ನು ಒಪ್ಪಿಕೊಂಡಿದ್ದಾರೆ. ರಣವೀರ್ ಇದಕ್ಕೆ ಕಾರಣವೆಂದು ದೀಪಿಕಾ ಹೇಳಿದ್ದಾರೆ.

ತುಂಬಾ ಫ್ರೀಯಾಗಿರುವ ರಣವೀರ್ ಯಡವಟ್ಟು ಮಾಡಿಕೊಳ್ತಾರೆ. ಅವರ ಮಸ್ತಿಗೆ ಬಟ್ಟೆಗಳು ಕೆಲವೊಮ್ಮೆ ಹರಿದು ಹೋಗುವ ಸಾಧ್ಯತೆಯಿರುತ್ತದೆ. ಅದಕ್ಕಾಗಿಯೇ  ಸೂಜಿ ದಾರವನ್ನು ಒಯ್ಯುತ್ತಾನೆ ಎಂದಿದ್ದಾರೆ. ಘಟನೆಯೊಂದನ್ನು ಇದೇ ವೇಳೆ ವಿವರಿಸಿದ ದೀಪಿಕಾ, ಫೋಟೋ ತೋರಿಸಿದ್ದಾರೆ. ಬಾರ್ಸಿಲೋನಾದಲ್ಲಿ ನಡೆದ ಸಂಗೀತ ಉತ್ಸವದಲ್ಲಿ  ರಣವೀರ್, ಸಡಿಲವಾದ ಪ್ಯಾಂಟ್ ಧರಿಸಿದ್ದರಂತೆ. ಈ ವೇಳೆ ಕೆಲ ವಿಚಿತ್ರ ಡಾನ್ಸ್ ಸ್ಟೆಪ್ಸ್ ತೋರಿಸಿದ್ದಾರೆ. ಆಗ ಪ್ಯಾಂಟ್ ಪರ್ ಎಂದು ಹರಿದಿದೆ. ಇರಿ, ನನ್ನ ಬಳಿ ಸೂಚಿ-ದಾರವಿದೆ ಎಂದ ದೀಪಿಕಾ, ಅಲ್ಲಿಯೇ ಪ್ಯಾಂಟ್ ಹೊಲಿದ್ರಂತೆ. ಇಷ್ಟೇ ಅಲ್ಲ ಸೇಪ್ಟಿಪಿನ್ ಕೂಡ ಜೊತೆಗೆ ಒಯ್ತಾರಂತೆ ದೀಪಿಕಾ,

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...