alex Certify ಈ ಕಾರಣಕ್ಕೆ ಪೊಲೀಸ್‌ ಠಾಣೆಯಲ್ಲೇ ಠಿಕಾಣಿ ಹೂಡಿದ್ದಾರೆ ಬಾಂಗ್ಲಾ ದಂಪತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಕಾರಣಕ್ಕೆ ಪೊಲೀಸ್‌ ಠಾಣೆಯಲ್ಲೇ ಠಿಕಾಣಿ ಹೂಡಿದ್ದಾರೆ ಬಾಂಗ್ಲಾ ದಂಪತಿ

ಎರಡು ವರ್ಷಗಳ ಜೈಲುವಾಸ ಮುಗಿದ ಬಳಿಕವೂ ಬಾಂಗ್ಲಾದೇಶದ ಜೋಡಿಯೊಂದು ಪುಣೆಯ ಫರಸ್ಖಾನಾ ಪೊಲೀಸ್ ಠಾಣೆಯಲ್ಲಿ ಕಳೆದ ಎರಡು ತಿಂಗಳನ್ನು ಕಳೆದಿದೆ.

ಏಜೆಂಟ್ ಒಬ್ಬರ ಮೂಲಕ ಪುಣೆಗೆ ಎರಡು ವರ್ಷಗಳ ಹಿಂದೆ ಆಗಮಿಸಿದ ಈ ದಂಪತಿ ಬಳಿ ಪ್ರವಾಸದ ಸೂಕ್ತ ದಾಖಲೆಗಳಿರಲಿಲ್ಲ ಎನ್ನಲಾಗಿದೆ. ಈ ಸಂಬಂಧ ದೂರು ದಾಖಲಾದ ಕಾರಣ ಇಬ್ಬರೂ ಯೆರವಾಡಾ ಜೈಲಿನಲ್ಲಿ ಎರಡು ವರ್ಷ ಸೆರೆವಾಸ ಅನುಭವಿಸಿದ್ದಾರೆ.

ಸೆರೆವಾಸ ಮುಗಿದ ಬಳಿಕವೂ, ಈ ದಂಪತಿಗಳ ಬಳಿ ಸೂಕ್ತ ದಾಖಲೆಗಳು ಇಲ್ಲದ ಕಾರಣ ಅವರನ್ನು ಮರಳಿ ಬಾಂಗ್ಲಾದೇಶಕ್ಕೆ ಕಳುಹಿಸಲು ಸಾಧ್ಯವಾಗಿಲ್ಲ. ಈ ಸಂಬಂಧ ಬಾಂಗ್ಲಾದೇಶ ರಾಯಭಾರ ಕಚೇರಿಗೆ ಮನವಿ ಮಾಡಿದರೂ ಸಹ ಪ್ರಕರಣದಲ್ಲಿ ಹೇಳಿಕೊಳ್ಳುವ ಪ್ರಗತಿ ಕಂಡುಬಂದಿಲ್ಲ.

“400ಕ್ಕೆಲ್ಲಾ ಇಂಥದ್ದೇ ಸೀರೆ ಸಿಗುತ್ತೆ”: ಪ್ರಖ್ಯಾತ ಡಿಸೈನರ್‌ನ ದುಬಾರಿ ವಸ್ತ್ರಗಳೀಗ ಟ್ರೋಲ್‌ ಐಟಂ

ಮೊಹಮ್ಮದ್ ಹಾಗೂ ಮಜಿದಾ ಮೊಂಡಲ್ ಹೆಸರಿನ ಈ ದಂಪತಿಗಳು ಬಾಂಗ್ಲಾದೇಶದ ಖುಲ್ನಾದವರಾಗಿದ್ದು, ಇವರನ್ನು ಮರಳಿ ಕಳುಹಿಸಲು ಶಾಸನಾತ್ಮಕ ಪ್ರಕ್ರಿಯೆಗಳಲ್ಲಿ ವಿಳಂಬವಾಗುತ್ತಿರುವ ಕಾರಣ ಕೋರ್ಟ್ ಆದೇಶಾನುಸಾರ ಇವರಿಗೆ ಪೊಲೀಸ್ ಠಾಣೆಯಲ್ಲೇ ಇರಲು ವ್ಯವಸ್ಥೆ ಮಾಡಿರುವುದಾಗಿ ಫರಸ್ಖಾನಾ ಪೊಲೀಸ್ ಠಾಣೆಯ ಸೂಪರಿಂಟೆಂಡೆಂಟ್ ರಾಜೇಂದ್ರ ಲಂಡಾಗೇ ತಿಳಿಸಿದ್ದಾರೆ.

ದಂಪತಿಗೆ ಪ್ರತಿನಿತ್ಯ 2-3 ಬಾರಿ ಊಟದ ವ್ಯವಸ್ಥೆ ಮಾಡುತ್ತಿರುವ ಪೊಲೀಸರು, ಈದ್ ಹಬ್ಬದ ಸಂದರ್ಭದಲ್ಲಿ ಹೊಸ ಬಟ್ಟೆಗಳನ್ನೂ ಕೊಡಿಸಿದ್ದಾರೆ. ಪೊಲೀಸ್ ಠಾಣೆಯ ಆವರಣದಲ್ಲೇ ಪ್ರತಿನಿತ್ಯ ಎರಡು ಬಾರಿ ಪ್ರಾರ್ಥನೆಯನ್ನೂ ಮಾಡುತ್ತಾರೆ ಈ ದಂಪತಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...