ಪುರುಷರ ಪ್ರತಿಯೊಂದು ಉದ್ದ ಕೈಗಳ ಶರ್ಟ್ಗಳ ಕಫ್‌ನಲ್ಲಿ ಎರಡು ಬಟನ್‌ಗಳಿರುತ್ತವೆ ಎನ್ನುವುದನ್ನು ನೀವು ನೋಡಿರುತ್ತೀರಿ ಅಲ್ಲವೆ? ಆದರೆ ಎಲ್ಲಾ ಶರ್ಟ್ಗಳಿಗೂ ಎರಡೇ ಬಟನ್‌ಗಳನ್ನು ಏಕೆ ಇಟ್ಟಿರುತ್ತಾರೆ ಎಂದು ನೀವೇನಾದರೂ ಯೋಚನೆ ಮಾಡಿದ್ದೀರಾ ಅಥವಾ ಈಗ ಈ ಪ್ರಶ್ನೆ ಕೇಳಿದ ಬಳಿಕ ಅದ್ಯಾಕೆ ಎರಡೇ ಬಟನ್ಗಳು ಇರಬಹುದು ಎಂದು ಊಹಿಸಿದ್ದೀರಾ?
ಇದು ಫ್ಯಾಷನ್ ಅಥವಾ ಅಲಂಕಾರಕ್ಕೆ ಎಂದು ನೀವು ಅಂದುಕೊಂಡಿದ್ದರೆ ಅದು ತಪ್ಪು ಎಂದು ಟಿಕ್‌ಟಾಕ್‌ನಲ್ಲಿ @joe_x_style ಖಾತೆಯನ್ನು ನಡೆಸುತ್ತಿರುವ ಸ್ಟೈಲಿಸ್ಟ್ ಜೋ ಹೇಳಿದ್ದಾರೆ. ಒಂದು ವೇಳೆ ನಿಮಗೆ ಈ ಉತ್ತರ ಗೊತ್ತಿಲ್ಲದಿದ್ದರೆ ನಾವು ಹೇಳುತ್ತೇನೆ ಕೇಳಿ ಎಂದಿದ್ದಾರೆ ಜೋ.
ವೀಡಿಯೊದಲ್ಲಿ ಬಟನ್‌ಗಳನ್ನು ತೋರಿಸುತ್ತಾ, ಅವರು ವಿವರಿಸಿದ್ದಾರೆ. ಬಲಗೈಯನ್ನು ಬಳಸುವವರು ಯಾವಾಗಲೂ ತಮ್ಮ ಬಲಗೈಯಲ್ಲಿ ಬಿಗಿಯಾದ ಬಟನ್ ಬಯಸುತ್ತಾರೆ.
ಇನ್ನೊಂದು ಕೈಯಲ್ಲಿ ಅವರು ವಾಚ್ ಕಟ್ಟುವ ಹಿನ್ನೆಲೆಯಲ್ಲಿ ವಾಚ್ ನೋಡಲು ಸುಲಭವಾಗಲಿ ಎಂದು ಲೂಸ್ ಬಟನ್ ಇಷ್ಟಪಡುತ್ತಾರೆ. ಎಡಗೈಯನ್ನು ಕೆಲಸ ಕಾರ್ಯಗಳಿಗೆ ಬಳಸುವವರು, ಎಡಗೈಯಲ್ಲಿ ಬಿಗಿಯಾದ ಬಟನ್ ಬಯಸಿದರೆ, ಅಂಥವರು ಬಲಗೈಗೆ ಹೆಚ್ಚಾಗಿ ವಾಚ್ ಕಟ್ಟುತ್ತಾರೆ. ಆಗ ಬಲಗೈ ಬಟನ್ ಸಡಿಲ ಬಯಸುತ್ತಾರೆ. ಇದೇ ಕಾರಣಕ್ಕೆ ಎರಡೂ ಕೈಗಳಲ್ಲಿ ಎರಡು ಬಟನ್ ಇಟ್ಟು ಒಂದು ಟೈಟ್ ಒಂದು ಲೂಸ್ ಬಟನ್ ಇಡುತ್ತಾರೆ ಎಂದು ಅವರು ವಿವರಿಸಿದ್ದಾರೆ.
ವಿಭಿನ್ನ ಮಣಿಕಟ್ಟಿನ ಗಾತ್ರ ಹೊಂದಿರುವ ಜನರಿಗಾಗಿ ಈ ರೀತಿ ಮಾಡಿರುವುದಾಗಿ ತಾವು ಅಂದುಕೊಂಡಿದ್ದು, ಈ ಬಗ್ಗೆ ಯೋಚನೆಯೇ ಮಾಡಿರಲಿಲ್ಲ ಎಂದು ಹಲವರು ಕಮೆಂಟ್ನಲ್ಲಿ ತಿಳಿಸಿದ್ದಾರೆ.