alex Certify ‘ಪಾನಿಪುರಿ’ ಮಾರಾಟ ಬ್ಯಾನ್ ಮಾಡಿದೆ ಈ ನಗರ…! ಇದಕ್ಕಿದೆ ಒಂದು ಕಾರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಪಾನಿಪುರಿ’ ಮಾರಾಟ ಬ್ಯಾನ್ ಮಾಡಿದೆ ಈ ನಗರ…! ಇದಕ್ಕಿದೆ ಒಂದು ಕಾರಣ

ನೇಪಾಳದ ಕಠ್ಮುಂಡು ಕಣಿವೆಯ ಲಲಿತ್ಪುರ್ ಮೆಟ್ರೋಪಾಲಿಟನ್ ನಗರದಲ್ಲಿ ಪಾನಿಪುರಿ ಮಾರಾಟದ ಮೇಲೆ ನಿಷೇಧ ಹೇರಲಾಗಿದೆ. ಕಣಿವೆಯ 12 ಮಂದಿಗೆ ಕಾಲರಾ ತಗುಲಿರುವುದು ದೃಢಪಟ್ಟ ಕಾರಣ ಈ ತೀರ್ಮಾನ ಕೈಗೊಳ್ಳಲಾಗಿದೆ.

ಶನಿವಾರದಂದು ಲಲಿತ್ಪುರ್ ಮೆಟ್ರೋಪಾಲಿಟನ್ ಸಿಟಿ ತೀರ್ಮಾನ ಕೈಗೊಂಡಿದ್ದು ಪಾನಿಪುರಿ ಮಾರಾಟ ನಿರ್ಬಂಧಿಸಲಾಗಿದೆ. ಪಾನಿಪುರಿಗೆ ಉಪಯೋಗಿಸಲಾದ ನೀರಿನಲ್ಲಿ ಕಾಲರಾ ಬ್ಯಾಕ್ಟೀರಿಯಾ ಪತ್ತೆಯಾದ ಕಾರಣ ಈ ಒಂದು ನಿರ್ಧಾರಕ್ಕೆ ಬರಲಾಗಿದೆ.

ಕಾಲರಾ ಹರಡದಂತೆ ಸಾಕಷ್ಟು ಜಾಗೃತ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಸಾರ್ವಜನಿಕರಿಗೆ ಕಾಲರ ಸೋಂಕಿನ ಲಕ್ಷಣಗಳು ಕಂಡು ಬಂದರೆ ಕೂಡಲೇ ಸಮೀಪದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಬೇಕೆಂದು ಕೋರಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...