ನೇಪಾಳದ ಕಠ್ಮುಂಡು ಕಣಿವೆಯ ಲಲಿತ್ಪುರ್ ಮೆಟ್ರೋಪಾಲಿಟನ್ ನಗರದಲ್ಲಿ ಪಾನಿಪುರಿ ಮಾರಾಟದ ಮೇಲೆ ನಿಷೇಧ ಹೇರಲಾಗಿದೆ. ಕಣಿವೆಯ 12 ಮಂದಿಗೆ ಕಾಲರಾ ತಗುಲಿರುವುದು ದೃಢಪಟ್ಟ ಕಾರಣ ಈ ತೀರ್ಮಾನ ಕೈಗೊಳ್ಳಲಾಗಿದೆ.
ಶನಿವಾರದಂದು ಲಲಿತ್ಪುರ್ ಮೆಟ್ರೋಪಾಲಿಟನ್ ಸಿಟಿ ತೀರ್ಮಾನ ಕೈಗೊಂಡಿದ್ದು ಪಾನಿಪುರಿ ಮಾರಾಟ ನಿರ್ಬಂಧಿಸಲಾಗಿದೆ. ಪಾನಿಪುರಿಗೆ ಉಪಯೋಗಿಸಲಾದ ನೀರಿನಲ್ಲಿ ಕಾಲರಾ ಬ್ಯಾಕ್ಟೀರಿಯಾ ಪತ್ತೆಯಾದ ಕಾರಣ ಈ ಒಂದು ನಿರ್ಧಾರಕ್ಕೆ ಬರಲಾಗಿದೆ.
ಕಾಲರಾ ಹರಡದಂತೆ ಸಾಕಷ್ಟು ಜಾಗೃತ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಸಾರ್ವಜನಿಕರಿಗೆ ಕಾಲರ ಸೋಂಕಿನ ಲಕ್ಷಣಗಳು ಕಂಡು ಬಂದರೆ ಕೂಡಲೇ ಸಮೀಪದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಬೇಕೆಂದು ಕೋರಲಾಗಿದೆ.