ಮಧ್ಯಾಹ್ನ ಅಥವಾ ರಾತ್ರಿಯ ಊಟದ ನಂತರ ಸ್ವಲ್ಪ ವಾಕಿಂಗ್ ಮಾಡಿದ್ರೆ ಹಾಯೆನಿಸುತ್ತದೆ. ಇದರಿಂದ ಜೀರ್ಣಕ್ರಿಯೆ ಸುಲಭವಾಗುತ್ತದೆ ಜೊತೆಗೆ ತೂಕವನ್ನೂ ಇಳಿಸಬಹುದು ಅನ್ನೋ ನಂಬಿಕೆ ಇದೆ. ಊಟವಾದ ಮೇಲೆ ವಾಕಿಂಗ್ ಮಾಡುವುದರಿಂದ ಇನ್ನೂ ಹಲವು ಪ್ರಯೋಜನಗಳಿವೆ. ಅವುಗಳ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು.
ಹೊಟ್ಟೆ ತುಂಬ ಊಟ ಮಾಡಿ, ಆರಾಮಾಗಿ ಕುಳಿತುಕೊಳ್ಳಬಾರದು. ಅಥವಾ ತಕ್ಷಣವೇ ಮಲಗಬಾರದು. 10-15 ನಿಮಿಷ ವಾಕಿಂಗ್ ಮಾಡುವುದರಿಂದ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸಬಹುದು.
ದೇಹದಲ್ಲಿ ಹೆಚ್ಚುವರಿ ಕೊಬ್ಬು ಅಥವಾ ಬೊಜ್ಜಿನಿಂದ ತೊಂದರೆ ಇರುವವರು ಆಹಾರ ಸೇವಿಸಿದ ನಂತರ ಅರ್ಧ ಅಥವಾ ಒಂದು ಗಂಟೆ ನಡೆಯುವುದು ಉತ್ತಮ. ಈ ರೀತಿ ಮಾಡುವುದರಿಂದ ಹೊಟ್ಟೆಯ ಬೊಜ್ಜು ಕಡಿಮೆಯಾಗುತ್ತದೆ.
ನಿದ್ರಾಹೀನತೆಯ ಸಮಸ್ಯೆ ಇರುವವರು, ಆಹಾರ ಸೇವಿಸಿದ ನಂತರ ವಾಕ್ ಮಾಡಿದರೆ ಚೆನ್ನಾಗಿ ನಿದ್ದೆ ಬರುತ್ತದೆ. ಇದನ್ನೇ ನಿಯಮಿತವಾಗಿ ಅಭ್ಯಾಸ ಮಾಡಿಕೊಂಡ್ರೆ ನಿದ್ರಾಹೀನತೆಯ ಸಮಸ್ಯೆ ಕೂಡ ನಿವಾರಣೆಯಾಗುತ್ತದೆ.
ಆಹಾರ ಸೇವಿಸಿದ ನಂತರ ವಾಕ್ ಮಾಡುವುದರಿಂದ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಇದು ಚಯಾಪಚಯವನ್ನು ಹೆಚ್ಚಿಸಲು ಸಹ ಸಹಾಯ ಮಾಡುತ್ತದೆ.
ವಾಕಿಂಗ್ ಮಾಡುವುದರಿಂದ ನಿಮ್ಮ ಜೀರ್ಣಾಂಗ ವ್ಯವಸ್ಥೆ ಸುಧಾರಿಸುತ್ತದೆ. ಮಲಬದ್ಧತೆಯ ಸಮಸ್ಯೆ ನೀಗುತ್ತದೆ. ಆಹಾರ ಸೇವಿಸಿದ ನಂತರ ವಾಕ್ ಮಾಡುವುದರಿಂದ ದೇಹಕ್ಕೆ ಸಾಕಷ್ಟು ಶಕ್ತಿ ಸಿಗುತ್ತದೆ. ಅಲ್ಲದೆ ದೇಹದ ಪ್ರತಿರಕ್ಷಣಾ ವ್ಯವಸ್ಥೆ ಕೂಡ ಸುಧಾರಿಸುತ್ತದೆ.