ಯಾವುದೇ ತಂಪು ಪಾನೀಯ ತೆಗೆದುಕೊಳ್ಳಿ ಬಾಟಲ್ ಪೂರ್ಣ ತುಂಬಿರುವುದಿಲ್ಲ. ಇದನ್ನು ಗಮನಿಸಿಯೇ ಇರುತ್ತೀರಿ. ಆದರೆ, ಏಕೆ ಖಾಲಿ ಬಿಟ್ಟಿರುತ್ತಾರೆಂದು ತಿಳಿದಿದ್ದೀರಾ? ಹಾಗಿದ್ದರೆ ಈ ಸುದ್ದಿ ಓದಿ ತಿಳಿದುಕೊಳ್ಳಿ.
ಬೇಸಿಗೆಯ ಸಮಯದಲ್ಲಿ ಬಾಯಾರಿಕೆಯನ್ನು ನೀಗಿಸಲು ತಂಪು ಪಾನೀಯ ಬಯಸುವುದು ಸಾಮಾನ್ಯ. ಹೆಚ್ಚಿನ ಕೆಫೀನ್ ಮತ್ತು ಸಕ್ಕರೆಯ ಅಂಶದ ಕಾರಣದಿಂದಾಗಿ ತಂಪು ಪಾನೀಯಗಳು ಹೈಡ್ರೇಟ್ ಮಾಡಲು ಸಹಾಯ ಮಾಡುತ್ತದೆ.
ಎಲ್ಲರೂ ಗಮನಿಸಿರುವಂತೆ ತಂಪು ಪಾನೀಯ ಬಾಟಲಿಗಳಲ್ಲಿ ಜಾಗ ಖಾಲಿ ಇರುತ್ತದೆ ಏಕೆ ಎಂಬ ಪ್ರಶ್ನೆ ಅನೇಕರಲ್ಲಿರಬಹುದು? ತಯಾರಕರು ಹೆಚ್ಚಿನ ಪಾನೀಯವನ್ನು ತುಂಬಲು ಆ ಜಾಗವನ್ನು ಬಳಸಬಹುದಲ್ಲವೇ? ಎಂಬ ಆಲೋಚನೆಯೂ ಬಂದಿರಬಹುದು.
ಈ ಪಾನೀಯಗಳು ತಮ್ಮ ಸುವಾಸನೆ ಮತ್ತು ರಿಫ್ರೆಶ್ ಸ್ವಭಾವಕ್ಕೆ ಸಹಾಯ ಮಾಡಲು ಹೆಚ್ಚಿನ ಕಾರ್ಬನ್ ಡೈಆಕ್ಸೆಡ್ ಹೊಂದಿರುತ್ತವೆ. ಹೆಚ್ಚಿನ ತಾಪಮಾನ ಇದ್ದಾಗ ಈ ಗ್ಯಾಸ್ ಸ್ವಲ್ಪಮಟ್ಟಿಗೆ ವಿಸ್ತರಿಸುತ್ತದೆ. ಅಷ್ಟು ಮಾತ್ರವಲ್ಲದೆ ಬಾಟಲಿಗಳನ್ನು ಕೆಲಮೊಮ್ಮೆ ಶೂನ್ಯಕ್ಕಿಂತ ಕಡಿಮೆ ತಾಪಮಾನದಲ್ಲಿ ಸಂಗ್ರಹಿಸಲಾಗುತ್ತದೆ. ಈ ಕಾರಣಕ್ಕಾಗಿ ಬಾಟಲಿಯೊಳಗಿನ ನೀರು ಹಿಗ್ಗುತ್ತದೆ.
ಕಡಿಮೆ ತಾಪಮಾನದಲ್ಲಿ ನೀರಿನ ವಿಸ್ತರಣೆ ಮತ್ತು ಹೆಚ್ಚಿನ ತಾಪಮಾನದಲ್ಲಿ ಇಂಗಾಲದ ಡೈಆಕ್ಸೈಡ್ ಬಾಟಲಿಯು ಸ್ಫೋಟಿಸಲು ಕಾರಣವಾಗಬಹುದು. ಇದು ಪಾನೀಯವನ್ನು ನಷ್ಟ ಮಾಡುವುದಲ್ಲದೇ, ಸುತ್ತಮುತ್ತಲಿನ ಪ್ರದೇಶವು ಸಿಹಿ ಮತ್ತು ಅಂಟು ದ್ರವ ಹರಡಲು ಕಾರಣವಾಗಬಹುದು. ಒಟ್ಟಾರೆ ವಾತಾವರಣದ ಉದ್ದೇಶ ಇಟ್ಟುಕೊಂಡು ಖಾಲಿ ಜಾಗ ಬಿಟ್ಟಿರಲಾಗುತ್ತದೆ.