ಮೇಘಸ್ಫೋಟದ ಕಾರಣ ಉತ್ತರಾಖಂಡದಲ್ಲಿ ಕನಿಷ್ಠ 16 ಮಂದಿ ಮೃತಪಟ್ಟಿದ್ದು, ರಾಜ್ಯದ ಕುಮಾಂವ್ ಸೇರಿದಂತೆ ಅನೇಕ ಭಾಗಗಳು ಜಲಾವೃತಗೊಂಡಿವೆ.
ಮಾನ್ಸೂನ್ ಅದಾಗಲೇ ಕಳೆದುಹೋಗಿದ್ದರೂ ಭಾರೀ ಮಳೆ ಏಕಾಗುತ್ತಿದೆ ಎಂದು ಅನೇಕರಲ್ಲಿ ಪ್ರಶ್ನೆ ಎದ್ದಿದೆ. ಬಂಗಾಳ ಕೊಲ್ಲಿಯಲ್ಲಿ ಎದ್ದಿರುವ ವಾಯುಭಾರ ಕುಸಿತದಿಂದಾಗಿ, ವಾಯುವ್ಯ ಭಾರತದಲ್ಲಿ ಸೃಷ್ಟಿಯಾಗಿರುವ ವಿಶಿಷ್ಟವಾದ ಹವಾಮಾನದ ಬೆಳವಣಿಗೆಯ ಕಾರಣದಿಂದ ಭಾರೀ ಮಳೆಯಾಗುತ್ತಿದೆ.
ಮತ್ತೊಂದು ವಿಡಿಯೋ ಮೂಲಕ ಸಂಗೀತ ಪ್ರಿಯರನ್ನು ಮಂತ್ರಮುಗ್ದಗೊಳಿಸಿದ ಮುಂಬೈ ಪೊಲೀಸ್ ಬ್ಯಾಂಡ್ ತಂಡ
ವಾಯುವ್ಯ ಭಾರತಕ್ಕೆ ಭಾರೀ ಮಳೆ ಹಾಗೂ ಹಿಮಪಾತ ತರುವ ಪಾಶ್ಚಾತ್ಯ ಮಾರುತಗಳು ಹಾಗೂ ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ವಾಯುಭಾರ ಕುಸಿತಗಳ ಮಿಲನದಿಂದಾಗಿ ಪ್ರದೇಶಕ್ಕೆ ಆರ್ದ್ರತೆಯ ಗಾಳಿಯ ಆಗಮನವಾಗಿದೆ. ಈ ಕಾರಣದಿಂದಾಗಿಯೇ ಉತ್ತರ ಭಾರತದಲ್ಲಿ ಭಾರೀ ಮಳೆಯಾಗಿದೆ.