ಕೊರೊನಾ ಶುರುವಾದಾಗಿನಿಂದ ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರು ಮಹತ್ವದ ಕೆಲಸ ಮಾಡಿದ್ದಾರೆ. ಅವರ ಕೆಲಸಕ್ಕೆ ವ್ಯಾಪಕ ಮನ್ನಣೆ ಸಿಕ್ಕಿದೆ. ಜೀವವನ್ನು ಪಣಕ್ಕಿಟ್ಟು ಕೆಲಸ ಮಾಡ್ತಿರುವ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿಗೆ ಈಗ ಮತ್ತೊಂದು ಸಮಸ್ಯೆ ಶುರುವಾಗಿದೆ.
ನಾಲ್ಕು ಅಕ್ಷರ ಬಳಸಿ 11 ಮಕ್ಕಳಿಗೆ ಹೆಸರಿಟ್ಟಿದ್ದಾರೆ ಈ ದಂಪತಿ….!
ಮೊದಲೇ ಕೊರೊನಾ ಲಸಿಕೆ ತೆಗೆದುಕೊಂಡ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿಯಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗಿದೆ. ಇದ್ರಿಂದಾಗಿ ಅನೇಕ ವೈದ್ಯರು, ಬೂಸ್ಟರ್ ಡೋಸ್ ತೆಗೆದುಕೊಳ್ತಿದ್ದಾರೆ ಎನ್ನಲಾಗಿದೆ. ಕದ್ದುಮುಚ್ಚಿ ಬೂಸ್ಟರ್ ಡೋಸ್ ತೆಗೆದುಕೊಳ್ಳಲಾಗ್ತಿದೆ.
ಭಾರತದಲ್ಲಿ ವೈದ್ಯರಿಗೂ ಬೂಸ್ಟರ್ ಡೋಸ್ ಗೆ ಅನುಮತಿ ನೀಡಲಾಗಿಲ್ಲ. ಹಾಗಾಗಿ ಬೂಸ್ಟರ್ ಡೋಸ್ ತೆಗೆದುಕೊಂಡರೆ ಆ ವೈದ್ಯರನ್ನು ಕೊರೊನಾ ಮಾರ್ಗಸೂಚಿ ಉಲ್ಲಂಘಿಸಿದವರ ಸಾಲಿಗೆ ಸೇರಿಸಲಾಗುತ್ತದೆ. ಈಗ್ಲೂ ಅನೇಕ ವೈದ್ಯರು ಹಾಗೂ ಸಿಬ್ಬಂದಿ, ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡ್ತಿದ್ದಾರೆ. ಒಂದು ವೇಳೆ ಈ ಕೊರೊನಾ, ಕುಟುಂಬಸ್ಥರನ್ನು ಕಾಡಿದ್ರೆ ಎಂಬ ಭಯ ವೈದ್ಯರಿಗೆ ಶುರುವಾಗಿದೆ. ಈ ಆತಂಕ ತಪ್ಪಿಸಬೇಕೆಂದ್ರೆ, ಕೇಂದ್ರ ಸರ್ಕಾರ ಬೂಸ್ಟರ್ ಡೋಸ್ ಗೆ ಒಪ್ಪಿಗೆ ನೀಡಬೇಕು ಎಂಬ ಮಾತುಗಳು ಕೇಳಿ ಬರ್ತಿವೆ.
ಪಿಂಚಣಿದಾರರ ಗಮನಕ್ಕೆ: ಮನೆಯಲ್ಲೇ ಕುಳಿತು ಸಲ್ಲಿಸಬಹುದು ಜೀವನ ಪ್ರಮಾಣ ಪತ್ರ….!
ಬೂಸ್ಟರ್ ಡೋಸ್, ಆರೋಗ್ಯ ಸಿಬ್ಬಂದಿ ಹಾಗೂ ದುರ್ಬಲ ವರ್ಗದವರಿಗೆ ನೆರವಾಗಲಿದೆ. ಅಮೆರಿಕಾ ಸೇರಿದಂತೆ ಕೆಲ ದೇಶಗಳಲ್ಲಿ ಬೂಸ್ಟರ್ ಡೋಸ್ ಗೆ ಅನುಮತಿ ನೀಡಲಾಗಿದೆ. ಹೆಚ್ಚಿನ ಅಪಾಯದಲ್ಲಿರುವ ಜನರಿಗೆ ಬೂಸ್ಟರ್ ಡೋಸ್ ಕಡ್ಡಾಯಗೊಳಿಸಿದೆ. ಆದ್ರೆ ಭಾರತದಲ್ಲಿ ಶೇಕಡಾ 26.5 ರಷ್ಟು ಜನರಿಗೆ ಮಾತ್ರ ಎರಡು ಡೋಸ್ ಲಸಿಕೆ ನೀಡಲಾಗಿದೆ.