alex Certify ಅಮಿತಾಬ್ ಫ್ರೆಂಚ್ ಗಡ್ಡದ ಹಿಂದಿದೆ ಈ ರಹಸ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಮಿತಾಬ್ ಫ್ರೆಂಚ್ ಗಡ್ಡದ ಹಿಂದಿದೆ ಈ ರಹಸ್ಯ

Aks' reason behind Amitabh Bachchan's French beard | Bollywood Bubble

ನಟನೆಗೆ ಮಾತ್ರವಲ್ಲ ಫ್ಯಾಷನ್ ವಿಷ್ಯದಲ್ಲೂ ಅಮಿತಾಬ್ ಬಚ್ಚನ್ ಮುಂದಿದ್ದಾರೆ. ಈಗ್ಲೂ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಸ್ಟೈಲ್ ಅನುಸರಿಸುವವರ ಸಂಖ್ಯೆ ಸಾಕಷ್ಟಿದೆ. ಅಮಿತಾಬ್ ಬಚ್ಚನ್ ಅನೇಕ ವರ್ಷಗಳಿಂದ ಗಡ್ಡ ಶೇವ್ ಮಾಡಿಲ್ಲ. ಅನೇಕ ವರ್ಷಗಳಿಂದ ಅವರು ಫ್ರೆಂಚ್ ಕಟ್ ಗಡ್ಡದಲ್ಲಿ ಕಾಣಿಸಿಕೊಳ್ತಿದ್ದಾರೆ. ಅದಕ್ಕೆ ಕಾರಣವೇನು ಎಂಬುದು ನಿಮಗೆ ಗೊತ್ತಾ?

ಚಿತ್ರರಂಗದ ಪ್ರಸಿದ್ಧ ನಿರ್ದೇಶಕರಾದ ರಾಕೇಶ್ ಓಂಪ್ರಕಾಶ್ ಮೆಹ್ರಾ, ಅಮಿತಾಬ್ ಬಚ್ಚನ್  ಗಡ್ಡದ ಗುಟ್ಟು ಹೇಳಿದ್ದಾರೆ, ಮೆಹ್ರಾ, ಅಮಿತಾಬ್ ಬಚ್ಚನ್ ರಿಗಾಗಿ ಕಥೆ ಬರೆದಿದ್ದರಂತೆ. ಅದ್ರಲ್ಲಿ ನಟಿನಿಗೆ ಫ್ರೆಂಚ್ ಗಡ್ಡ ಇರಬೇಕಾಗಿತ್ತಂತೆ. ವಿಮಾನದಲ್ಲಿ ಅಮಿತಾಬ್ ಬಚ್ಚನ್ ಈ ಸ್ಕ್ರಿಪ್ಟ್ ಓದಬೇಕಾಗಿತ್ತಂತೆ. ಸ್ಕ್ರಿಪ್ಟ್ ಬಗ್ಗೆ ಮೆಹ್ರಾ ಭಯದಲ್ಲಿದ್ದರಂತೆ. ಸ್ಕ್ರಿಪ್ಟ್ ಓದಿದ ನಂತ್ರ, ಇದನ್ನು ಬರೆಯುವಾಗ ಏನನ್ನು ಕುಡಿಯುತ್ತಿದ್ದೆ ಎಂದು ಬಿಗ್ ಬಿ ಕೇಳಿದ್ದರಂತೆ. ಇದಕ್ಕೆ ಮೆಹ್ರಾ, ಕೋಕ್ ಹಾಗೂ ರಮ್ ಎಂದಿದ್ದರಂತೆ. ಸ್ಕ್ರಿಪ್ಟ್ ಓದಿ ಅಮಿತಾಬ್ ಓಕೆ ಎಂದಿದ್ದರಂತೆ.

ಚಿತ್ರಕ್ಕಾಗಿ ಫ್ರೆಂಚ್ ಗಡ್ಡ ಬಿಟ್ಟ ಅಮಿತಾಬ್ ತುಂಬಾ ಸುಂದರವಾಗಿ ಕಾಣ್ತಿದ್ದರಂತೆ. ಚಿತ್ರದಲ್ಲಿ ಅಮಿತಾಬ್ ಸ್ಟೈಲ್ ಎಲ್ಲರಿಗೂ ಇಷ್ಟವಾಗಿತ್ತಂತೆ. ಅಮಿತಾಬ್ ಕೂಡ ತಮ್ಮ ಗಡ್ಡಕ್ಕೆ ಫಿದಾ ಆಗಿ, ಅದನ್ನು ಹಾಗೆ ಉಳಿಸಿಕೊಂಡಿದ್ದಾರೆ ಎನ್ನುತ್ತಾರೆ ಮೆಹ್ರಾ.

ಆಕ್ಸ್ ಚಿತ್ರ 14 ವರ್ಷ ಪೂರ್ಣಗೊಳಿಸಿದೆ. ಈ ಚಿತ್ರದಿಂದಲೇ ನಾನು ಫ್ರೆಂಚ್ ಗಡ್ಡ ಶುರು ಮಾಡಿದ್ದು ಎಂದು ಅಮಿತಾಬ್ ಕೂಡ ಬರೆದುಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...