ರಾಜ್ಯದಲ್ಲಿ ಯಡಿಯೂರಪ್ಪ ರಾಜೀನಾಮೆ ವಿಚಾರ ಸದ್ದು ಮಾಡ್ತಿರೋದು ಒಂದೆಡೆಯಾದ್ರೆ ಯಡಿಯೂರಪ್ಪ ರಾಜೀನಾಮೆ ಬಳಿಕ ರಾಜ್ಯದ ಮುಂದಿನ ಸಿಎಂ ಯಾರಾಗ್ತಾರೆ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ. ಈಗಾಗಲೇ ಸಾಕಷ್ಟು ಹೆಸರುಗಳು ಸಿಎಂ ರೇಸ್ನಲ್ಲಿ ಕೇಳಿಬರ್ತಿದೆ.
ಬಿಜೆಪಿ ಹೈಕಮಾಂಡ್ ಸದಾ ಅಚ್ಚರಿಯ ಹೆಸರುಗಳನ್ನ ಆಯ್ಕೆ ಮಾಡೋದ್ರಲ್ಲಿ ಎತ್ತಿದ ಕೈ. ಯುಪಿ ಚುನಾವಣೆ, ಗುಜರಾತ್ ಚುನಾವಣೆಗಳಲ್ಲಿ ಸಿಎಂ ಹೆಸರು ಆಯ್ಕೆ ಮಾಡಿರೋದು ಈ ಮಾತಿಗೆ ಪ್ರತ್ಯಕ್ಷ ಸಾಕ್ಷಿಯಾಗಿದೆ. ಹೀಗಾಗಿ ಅನುಭವಿ ನಾಯಕರೇ ಸಿಎಂ ಆಗ್ತಾರೆ ಎಂಬ ಮಾತನ್ನು ನಾವು ಗಂಭೀರವಾಗಿ ಪರಗಣಿಸುವಂತಿಲ್ಲ. ಬಿಜೆಪಿ ಹೈಕಮಾಂಡ್ ತನ್ನ ಪ್ರತಿಬಾರಿಯ ರೂಢಿಯಂತೆ ಅಚ್ಚರಿಯ ಹೆಸರೊಂದನ್ನ ಘೋಷಣೆ ಮಾಡುವ ಸಾಧ್ಯತೆ ಕೂಡ ಇದೆ.
ಪ್ರಹ್ಲಾದ್ ಜೋಷಿ : ಕೇಂದ್ರ ಸರ್ಕಾರದ ಜೊತೆ ಉತ್ತಮ ಸಂಬಂಧ ಬೆಳೆಸಿಕೊಂಡು ಬಂದಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೆಸರು ಸಿಎಂ ರೇಸ್ನಲ್ಲಿ ಇದ್ದಾರೆ. ಸಿಎಂ ಸ್ಥಾನಕ್ಕೆ ಬಹಳ ಹಿಂದಿನಿಂದಲೂ ಕಣ್ಣಿಟ್ಟಿದ್ದ ಜೋಶಿಗೆ ಈ ಬಾರಿ ಅದೃಷ್ಟ ಒಲಿಯುವ ಸಾಧ್ಯತೆ ಇದೆ.
ಬಸವರಾಜ ಬೊಮ್ಮಾಯಿ : ರಾಜ್ಯದ ಗೃಹಮಂತ್ರಿಯಾಗಿರುವ ಬಸವರಾಜ ಬೊಮ್ಮಾಯಿ ಪಕ್ಷದಲ್ಲಿ ತಮ್ಮದೇ ಪ್ರಭಾವವನ್ನ ಹೊಂದಿದ್ದಾರೆ. ಯಡಿಯೂರಪ್ಪರ ಬದಲು ಹೈಕಮಾಂಡ್ ಮತ್ತೊಮ್ಮೆ ಲಿಂಗಾಯತ ನಾಯಕನನ್ನೇ ಹುಡುಕಿದ್ದಲ್ಲಿ ಬೊಮ್ಮಾಯಿ ಸಿಎಂ ಆಗೋದು ಬಹುತೇಕ ಪಕ್ಕಾ ಆಗಲಿದೆ.
ಮುರುಗೇಶ ನಿರಾಣಿ : ಬಿಎಸ್ವೈ ಸಂಪುಟದಲ್ಲಿ ಸ್ಥಾನ ಪಡೆದಿರುವ ನಿರಾಣಿ ಸಿಎಂ ಸ್ಥಾನದ ಪ್ರಬಲ ಆಕಾಂಕ್ಷಿ. ಆರ್ಎಸ್ಎಸ್ ಹಾಗೂ ಪಂಚಮಸಾಲಿ ಸಮುದಾಯದ ಬೆಂಬಲ ನಿರಾಣಿಗಿರುವ ಪ್ಲಸ್ ಪಾಯಿಂಟ್ ಆಗಿದೆ.
ಇನ್ನುಳಿದಂತೆ ರಾಜಕೀಯ ಜೀವನದಲ್ಲಿ ಕ್ಲೀನ್ ಚಿಟ್ ಹೊಂದಿರುವ ಅಶ್ವತ್ಥ ನಾರಾಯಣ, ಒಕ್ಕಲಿಗ ನಾಯಕ ಸಿ.ಟಿ ರವಿ, ಶಾಸಕ ಅರವಿಂದ ಬೆಲ್ಲದ್ ಹಾಗೂ ಸಚಿವ ಆರ್.ಅಶೋಕ್ ಕೂಡ ಈ ಬಾರಿ ರಾಜ್ಯದ ಸಿಎಂ ಗದ್ದುಗೆ ಏರಿದರೆ ಯಾವುದೇ ಆಶ್ಚರ್ಯವಿಲ್ಲ.