alex Certify ಹೆಲಿಕಾಪ್ಟರ್​ ದುರಂತದಲ್ಲಿ ಬಿಪಿನ್​ ರಾವತ್​ ದಂಪತಿ ದುರ್ಮರಣ: ಮಧುಲಿಕಾ ರಾವತ್​ ನಡೆದು ಬಂದ ಹಾದಿ ಹೇಗಿತ್ತು ಗೊತ್ತಾ..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೆಲಿಕಾಪ್ಟರ್​ ದುರಂತದಲ್ಲಿ ಬಿಪಿನ್​ ರಾವತ್​ ದಂಪತಿ ದುರ್ಮರಣ: ಮಧುಲಿಕಾ ರಾವತ್​ ನಡೆದು ಬಂದ ಹಾದಿ ಹೇಗಿತ್ತು ಗೊತ್ತಾ..?

ಸೇನಾ ಹೆಲಿಕಾಪ್ಟರ್​​ ದುರಂತದಲ್ಲಿ ಸಿಡಿಎಸ್​ ಜನರಲ್​ ಬಿಪಿನ್​ ರಾವತ್​ ಹಾಗೂ ಅವರ ಪತ್ನಿ ಮಧುಲಿಕಾ ರಾವತ್​ ಸೇರಿದಂತೆ 14 ಮಂದಿ ದುರ್ಮರಣಕ್ಕೀಡಾಗಿದ್ದಾರೆ. ತಮಿಳುನಾಡಿನ ಕುನೂರ್​ ಎಂಬಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಈ ದುರ್ಘಟನೆ ಸಂಭವಿಸಿದೆ.

ಸೇನಾ ಹೆಲಿಕಾಪ್ಟರ್​ ದುರಂತದಲ್ಲಿ ದುರ್ಮರಣಕ್ಕೀಡಾದ ಬಿಪಿನ್​ ರಾವತ್​ ಪತ್ನಿ ಮಧುಲಿಕಾ ರಾವತ್​​ ದೆಹಲಿಯಲ್ಲಿ ತಮ್ಮ ಶಿಕ್ಷಣವನ್ನು ಪೂರೈಸಿದ್ದರು. ದೆಹಲಿ ವಿಶ್ವವಿದ್ಯಾಲಯದಲ್ಲಿ ಮನಃಶಾಸ್ತ್ರಜ್ಞ ವಿಭಾಗದಲ್ಲಿ ಮಧುಲಿಕಾ ಪದವಿ ಸ್ವೀಕರಿಸಿದ್ದರು.

ಜನರಲ್​ ಬಿಪಿನ್​ ರಾವತ್​ ಹಾಗೂ ಮಧುಲಿಕಾ ರಾವತ್​ ದಂಪತಿಗೆ ಕೃತಿಕಾ ರಾವತ್​ ಹಾಗೂ ಇನ್ನೊಬ್ಬ ಮಗಳಿದ್ದಾರೆ. ಮಧುಲಿಕಾ ರಾವತ್​ ಭಾರತದ ಅತೀ ದೊಡ್ಡ ಎನ್​ಜಿಓಗಳಲ್ಲಿ ಒಂದಾದ ಆರ್ಮಿ ವೈವ್ಸ್​ ವೆಲ್​ಫೇರ್ ಅಸೋಸಿಯೇಷನ್​​ನ ಅಧ್ಯಕ್ಷೆಯಾಗಿದ್ದರು. ಈ ಅಸೋಸಿಯೇಷನ್​ ಅಧ್ಯಕ್ಷೆಯಾಗಿ ಮಧುಲಿಕಾ ಹುತಾತ್ಮ ಯೋಧರ ಪತ್ನಿಯಂದಿರ ಕಲ್ಯಾಣಕ್ಕಾಗಿ ಸಾಕಷ್ಟು ಶ್ರಮಿಸಿದ್ದರು.

ಸೇನಾ ಸಿಬ್ಬಂದಿಯ ಪತ್ನಿಯಂದಿರ ಕಲ್ಯಾಣ ಮಾತ್ರವಲ್ಲದೇ ವಿಕಲ ಚೇತನ ಮಕ್ಕಳ ಅಭಿವೃದ್ಧಿಗೂ ಶ್ರಮಿಸಿದ ಕೀರ್ತಿ ಮಧುಲಿಕಾರಿಗೆ ಸೇರುತ್ತದೆ. ಕ್ಯಾನ್ಸರ್​ ಪೀಡಿತರ ಶ್ರೇಯೋಭಿವೃದ್ಧಿ ಸೇರಿದಂತೆ ಸಾಕಷ್ಟು ಸಮಾಜಮುಖಿ ಕಾರ್ಯಗಳಲ್ಲಿ ಮಧುಲಿಕಾ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.

ಸೇನಾ ಸಿಬ್ಬಂದಿಯ ಪತ್ನಿಯಂದಿರು ಆರ್ಥಿಕವಾಗಿ ಸದೃಢರಾಗಿರಬೇಕು ಎಂಬ ಕಾರಣಕ್ಕೆ ಅವರಿಗೆ ಬ್ಯೂಟಿಷಿಯನ್​ ಕೋರ್ಸ್​, ಟೇಲರಿಂಗ್​ ಕೋರ್ಸ್​, ಕೇಕ್​​ ತಯಾರಿಕೆ , ಬ್ಯಾಗ್​ ನಿರ್ಮಾಣ ಹಾಗೂ ನೇಯ್ಗೆ ಕೆಲಸ ಸೇರಿದಂತೆ ಸಾಕಷ್ಟು ವೃತ್ತಿಪರ ಕೋರ್ಸ್​ಗಳಿಗೆ ಸೇರುವಂತೆ ಉತ್ತೇಜಿಸುತ್ತಿದ್ದರು. ಮಹಿಳೆಯರನ್ನು ಆರ್ಥಿಕವಾಗಿ ಸದೃಢಗೊಳಿಸುವುದು ಮಾತ್ರವಲ್ಲದೇ ಅವರ ಆರೋಗ್ಯದ ಕಡೆಯೂ ಗಮನ ನೀಡುತ್ತಿದ್ದರು.

ವೆಲ್ಲಿಂಗ್ಟನ್​​ನ ರಕ್ಷಣಾ ಸೇವಾ ಸಿಬ್ಬಂದಿ ಕಾಲೇಜಿನತ್ತ ಸೇನಾ ಹೆಲಿಕಾಪ್ಟರ್​ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಸಿಡಿಎಸ್​ ಜನರಲ್​ ಬಿಪಿನ್​ ರಾವತ್​ ಹಾಗೂ ಅವರ ಪತ್ನಿ ಮಧುಲಿಕಾ ರಾವತ್​ ಹೆಲಿಕಾಪ್ಟರ್ ದುರಂತದಲ್ಲಿ ನಿಧನರಾಗಿದ್ದಾರೆ. ಈ ದುರಂತದಲ್ಲಿ ಒಟ್ಟು 14 ಮಂದಿ ಸಾವಿಗೀಡಾಗಿದ್ದಾರೆ. ರಾವತ್​ ದಂಪತಿ ನಿಧನಕ್ಕೆ ಇಡೀ ದೇಶವೇ ಕಂಬನಿ ಮಿಡಿದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...