alex Certify Big News: ಕೊರೋನಾ ರೋಗಿಗಳ ಚಿಕಿತ್ಸೆಗೆ ಎರಡು ಹೊಸ ಔಷಧಿಗಳನ್ನ ಶಿಫಾರಸ್ಸು ಮಾಡಿದ ವಿಶ್ವ ಆರೋಗ್ಯ ಸಂಸ್ಥೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Big News: ಕೊರೋನಾ ರೋಗಿಗಳ ಚಿಕಿತ್ಸೆಗೆ ಎರಡು ಹೊಸ ಔಷಧಿಗಳನ್ನ ಶಿಫಾರಸ್ಸು ಮಾಡಿದ ವಿಶ್ವ ಆರೋಗ್ಯ ಸಂಸ್ಥೆ

ಕೊರೋನಾ ರೋಗಿಗಳ ಚಿಕಿತ್ಸೆಗೆ ವಿಶ್ವ ಆರೋಗ್ಯ ಸಂಸ್ಥೆ ಎರಡು ಹೊಸ ಔಷಧಿಗಳನ್ನ ಶಿಫಾರಸ್ಸು ಮಾಡಿದೆ. ಮೊದಲನೆಯದಾಗಿ, ಸಂಧಿವಾತಕ್ಕೆ ಚಿಕಿತ್ಸೆ ನೀಡಲು ಬಳಸುವ ಬಾರಿಸಿಟಿನಿಬ್ ಜಾನಸ್ ಕೈನೇಸ್ 1 (JAK1) , 2 (JAK2) ಪ್ರತಿರೋಧಕ ಮತ್ತು ಕಾರ್ಟಿಕೊಸ್ಟೆರಾಯ್ಡ್‌ ಗಳ ಸಂಯೋಜನೆಯನ್ನ ಸಿವಿಯರ್ ಅಥವಾ ಕ್ರಿಟಿಕಲ್ ಕೊರೋನಾ ರೋಗಿಗಳಿಗೆ ಶಿಫಾರಸು ಮಾಡಲಾಗಿದೆ.

ಅದೇ ಗೈಡ್ ಲೈನ್ ನ ಅಪ್‌ಡೇಟ್‌ನಲ್ಲಿ, ತೀವ್ರವಲ್ಲದ ಕೊರೋನಾ ರೋಗಿಗಳಿಗೆ ಮೊನೊಕ್ಲೋನಲ್ ಆಂಟಿಬಾಡಿ ಸೊಟ್ರೋವಿಮಾಬ್ ಬಳಕೆಯನ್ನು ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸು ಮಾಡಿದೆ. ಆದರೆ ಸೊಟ್ರೋವಿಮಾಬ್ ಅನ್ನು ಎಲ್ಲಾ ಸಂದರ್ಭದಲ್ಲಿ, ಎಲ್ಲರಿಗೂ ಶಿಫಾರಸ್ಸು ಮಾಡಿಲ್ಲ. ಆಸ್ಪತ್ರೆಗೆ ದಾಖಲಾಗುವ ಹೆಚ್ಚಿನ ಅಪಾಯದಲ್ಲಿರುವ ಜನರಿಗೆ ನೀಡಬೇಕೆಂದು WHO ಪ್ರಕಟಣೆ ತಿಳಿಸಿದೆ.

ಮುಂಬಲಿರುವ ವಸಂತಕಾಲದಲ್ಲಿ ಕೊರೋನಾ ಮತ್ತು ಇತರ ಉಸಿರಾಟದ ಕಾಯಿಲೆಗಳ ಹೆಚ್ಚಾಗಲಿವೆ, ಇವುಗಳನ್ನ ಎದುರಿಸಲು ಸನ್ನದ್ಧರಾಗಿ ಎಂದು ಎಚ್ಚರಿಸಿದ ನಂತರ ಈ ಹೊಸ ಔಷಧಿಗಳನ್ನ WHO ಶಿಫಾರಸ್ಸು ಮಾಡಿದೆ. ಜನಸಂಖ್ಯೆ ಮಿಶ್ರಣವು ಹೆಚ್ಚಾದಂತೆ ಉಸಿರಾಟದ ಕಾಯಿಲೆಗಳು ಹೆಚ್ಚಾಗುವ ಸಂಭವವಿದೆ, ಇನ್ಫ್ಲುಯೆನ್ಸದಂತಹ ಇತರ ಉಸಿರಾಟದ ರೋಗಕಾರಕಗಳು ಅಥವಾ ವಾಹಕಗಳು ವಸಂತಕಾಲದಲ್ಲಿ ಹರಡುತ್ತವೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಪ್ರಮುಖ ಅಧಿಕಾರಿ ಮಾರಿಯಾ ವ್ಯಾನ್ ಕೆರ್ಖೋವ್ ಅವರು ಹೇಳಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...