ಕೊರೋನಾ ರೂಪಾಂತರಿ ಒಮಿಕ್ರಾನ್ ಪತ್ತೆಯಾದ ನಂತರ ವಿಶ್ವದಲ್ಲಿ ಕೋವಿಡ್ ಕೇಸ್ ಗಳು ಭಾರಿ ಏರಿಕೆ ಕಂಡಿವೆ. ಕೊರೋನಾ ಪ್ರಕರಣಗಳು ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿವೆ. ಕಳೆದ 24 ಗಂಟೆ ಅವಧಿಯಲ್ಲಿ ವಿಶ್ವದಲ್ಲಿ 14.49 ಲಕ್ಷ ಕೊರೋನಾ ಕೇಸ್ ಪತ್ತೆಯಾಗಿವೆ. ಅಮೆರಿಕ ಒಂದರಲ್ಲಿಯೇ 2.29 ಲಕ್ಷ ಕೋವಿಡ್ ಕೇಸ್ ಗಳು ಪತ್ತೆಯಾಗಿವೆ.
ಆರಂಭದಲ್ಲಿಯೇ ಒಮಿಕ್ರಾನ್ ತಡೆಯದಿದ್ದರೆ ಭಾರಿ ಅಪಾಯ ಕಾದಿದೆ. ಆರೋಗ್ಯ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯಿಂದ ಒಮಿಕ್ರೋನ್ ಬಗ್ಗೆ ವಾರ್ನಿಂಗ್ ನೀಡಲಾಗಿದೆ.
ಒಮಿಕ್ರಾನ್ ಪತ್ತೆಯಾದ ಬಳಿಕ ಕೋವಿಡ್ ಕೇಸ್ ಗಳು ಗಣನೀಯ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ವಿಶ್ವದಲ್ಲಿ ಶೇಕಡ 70 ರಷ್ಟು ಕೋವಿಡ್ ಪ್ರಕರಣ ಜಾಸ್ತಿಯಾಗಿವೆ. ಹೀಗಾಗಿ ಈ ಬಗ್ಗೆ ಎಚ್ಚರಿಕೆ ವಹಿಸಬೇಕೆಂದು ವಿಶ್ವ ಆರೋಗ್ಯ ಸಂಸ್ಥೆಯಿಂದ ವಾರ್ನಿಂಗ್ ನೀಡಲಾಗಿದೆ.