ಯುರೋಪ್ನ ಸ್ಪೇಸ್ ಏಜೆನ್ಸಿಯ ಮಿಷನ್ನ ಪ್ರಯುಕ್ತ ಏಪ್ರಿಲ್ನಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ ಗಗನಯಾತ್ರಿ ಥಾಮಸ್ ಪೇಸ್ಕ್ವೇಟ್ ಭೂಮಿಯ ಅತ್ಯಂತ ಮನೋಹರ ಫೋಟೋಗಳನ್ನು ಶೇರ್ ಮಾಡಿದ್ದಾರೆ.
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಥೋಮಸ್ ಈ ಫೋಟೋಗಳನ್ನು ಕ್ಲಿಕ್ಕಿಸಿದ್ದಾರೆ.
ಇದು ರಾತ್ರಿಯ ವೇಳೆ ಕ್ಲಿಕ್ಕಿಸಲಾದ ಭೂಮಿಯ ಫೋಟೋ ಆಗಿದ್ದರೂ ಸಹ ಸಂಪೂರ್ಣ ನಕ್ಷತ್ರಪುಂಜಗಳೇ ಆವರಿಸಿವೆ ಎಂಬಂತೆ ಈ ಫೋಟೋ ಭಾಸವಾಗುತ್ತಿದೆ.
ಹೊಳೆಯುತ್ತಿರುವ ಭೂಮಿಯ ಫೋಟೋವನ್ನು ಥಾಮಸ್ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಈ ಫೋಟೋ ನೋಡಿದ ನೆಟ್ಟಿಗರು ಭೂಮಿಯ ಸೌಂದರ್ಯಕ್ಕೆ ಮಾರು ಹೋಗಿದ್ದಾರೆ.