ಈ ಪ್ರಶ್ನೆಗೆ ಮುಂಬೈ ನ್ಯಾಯಾಲಯ ಉತ್ತರದ ರೀತಿಯಲ್ಲಿ ತೀರ್ಪು ನೀಡಿದ್ದು, ಅಪಘಾತಕ್ಕೆ ದ್ವಿಚಕ್ರ ವಾಹನ ಮತ್ತು ಕಾರಿನ ಪ್ರಯಾಣಿಕರು ಸಮನಾದ ಹೊಣೆಗಾರರು ಎಂದು ಹೇಳಿದೆ.
ಈ ಅಪಘಾತಕ್ಕೆ ಸಂಬಂಧಿಸಿದಂತೆ 19 ವರ್ಷದ ಯುವತಿಯನ್ನು ಪ್ರಕರಣದಿಂದ ಖುಲಾಸೆಗೊಳಿಸಿರುವ ಮುಂಬೈನ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು, ಕಾರಿನ ಬಾಗಿಲನ್ನು ಇದ್ದಕ್ಕಿದ್ದಂತೆ ತೆಗೆದ ಪ್ರಯಾಣಿಕ ಮತ್ತು ಇದನ್ನು ಗಮನಿಸದೇ ದ್ವಿಚಕ್ರ ವಾಹನ ಚಲಾಯಿಸಿದ ಸವಾರರಿಬ್ಬರೂ ಅಪಘಾತಕ್ಕೆ ಸಮನಾದ ಹೊಣೆಗಾರರು ಎಂದು ಹೇಳಿದೆ.
ಘಟನೆ ವಿವರ: 2019 ರ ಮಾರ್ಚ್ 11 ರ ಬೆಳಗಿನ ಜಾವ ಸುಮಾರು 5.30 ಕ್ಕೆ ಹಾಜಿ ಹಾಲಿ ರಸ್ತೆಯಿಂದ ನಾರಿಮನ್ ಪಾಯಿಂಟ್ ಕಡೆಗೆ ಸ್ಕೂಟರ್ ನಲ್ಲಿ ವ್ಯಕ್ತಿಯೊಬ್ಬ ಪ್ರಯಾಣಿಸುತ್ತಿದ್ದ. ಗಿರ್ ಗಾಂವ್ ಚಾವ್ ಸಿಗ್ನಲ್ ಅನ್ನು ತಲುಪುವ ವೇಳೆಗೆ ಟ್ಯಾಕ್ಸಿಯಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕ ಕಾರಿನ ಡೋರ್ ತೆಗೆದಿದ್ದಾನೆ. ಆಗ ಡೋರ್ ಸ್ಕೂಟರ್ ನ ಹ್ಯಾಂಡಲ್ ಗೆ ಬಡಿದು ಸ್ಕೂಟರ್ ಸವಾರ ಕೆಳಗೆ ಬಿದ್ದಿದ್ದಾನೆ.
ಕಾಲಿಗೆ ತೀವ್ರ ಪೆಟ್ಟಾಗಿದ್ದರಿಂದ ನಾಯರ್ ಆಸ್ಪತ್ರೆಯಲ್ಲಿ ಸವಾರನಿಗೆ ಚಿಕಿತ್ಸೆ ನೀಡಲಾಗಿತ್ತು. ಈ ಬಗ್ಗೆ 19 ವರ್ಷದ ವಿದ್ಯಾರ್ಥಿನಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಈ ತೀರ್ಪು ನೀಡಿದೆ.